ಆನ್‌ಲೈನ್ ಜೂಜಾಟದ ಕರಾಳ ಭಾಗವು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ. ಮುಖ್ಯವಾಗಿ ಹೇಳುವುದಾದರೆ ಶೀಘ್ರವಾಗಿ ಹಣ ಗಳಿಸಬಹುದು ಎಂಬ ಉದ್ದೇಶದಿಂದ ಯುವಕರು ಇಂತಹ ಆಮಿಷಗಳಿಗೆ ಒಳಗಾಗುತ್ತಾರೆ. ಇನ್ನು ಇಂಗ್ಲೆಂಡ್ನಲ್ಲಿ ನಡೆಸಿದ "ಜೂಜಾಟದ ಸಮಸ್ಯೆ" ಅಧ್ಯಯನದ ಪ್ರಕಾರ, ಆನ್‌ಲೈನ್ ಜೂಜುಗಳಿಂದ ಆತ್ಮಹತ್ಯೆಗೆ ಪ್ರಯತ್ನಿಸಿದವರ ಸಂಖ್ಯೆ ಇತರ ಸಾವುಗಳಿಗಿಂತ ಎಂಟು ಪಟ್ಟು ಹೆಚ್ಚು ಇದೆ ಎಂದು ತಿಳಿದುಬಂದಿತ್ತು.
ಸಾಮಾನ್ಯವಾಗಿ "ಜೂಜಿನ ಚಟ"ವು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಅಷ್ಟೇ ಅಲ್ಲದೆ, ನಿರಂತರವಾಗಿ ಜೂಜು ಆಡುವಂತೆ ಪ್ರಚೋದನೆ ನೀಡುತ್ತದೆ.
ಭಾರತದಲ್ಲಿ ಇತ್ತೀಚೆಗೆ ಆನ್‌ಲೈನ್ ಜೂಜಿನಿಂದ ಸಂಭವಿಸಿದ ಆತ್ಮಹತ್ಯೆಗಳು ಮತ್ತು ಅಪರಾಧಗಳು:
ದಿನಾಂಕ | ವಯಸ್ಸು | ರೂ. | ಸುದ್ದಿ |
ಸೆ.14 | 28 | 8 ಲಕ್ಷ | ರೆಡ್ ಹಿಲ್ಸ್‌ನಲ್ಲಿ ನಡೆದ ಆನ್‌ಲೈನ್ ಜೂಜಿನಲ್ಲಿ ಸುಮಾರು 8 ಲಕ್ಷ ಕಳೆದುಕೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನನ್ನು ದಿನೇಶ್ ಎಂದು ಗುರುತಿಸಲಾಗಿದೆ. ಈತ ಖಾಸಗಿ ಟೆಲಿಕಾಂ ಸಂಸ್ಥೆಯ ಉದ್ಯೋಗಿಯಾಗಿದ್ದ. |
ಜು. 27 | 20 | 20,000 ರೂ. ಮತ್ತು ಉಳಿತಾಯ | ಜೂಜಿನ ಅಪ್ಲಿಕೇಶನ್‌ನಲ್ಲಿ ತನ್ನ ಉಳಿತಾಯದ ಹಣವನ್ನು ಕಳೆದುಕೊಂಡ ಬಳಿಕ ಕಾಲೇಜು ವಿದ್ಯಾರ್ಥಿ ಟ್ಯಾಟೂ ಸ್ಟುಡಿಯೋದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಮೃತನನ್ನು ನಿತೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ತನ್ನ ಪೋಷಕರು ಮತ್ತು ಸಹೋದರನೊಂದಿಗೆ ಟಿ.ಪಿ ಚತ್ರಂನಲ್ಲಿ ವಾಸಿಸುತ್ತಿದ್ದ. ಖಾಸಗಿ ಕಾಲೇಜಿನ ಮೂರನೇ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದ. ಅಷ್ಟೇ ಅಲ್ಲದೆ, ಅಮಿಂಜಿಕರೈನ ಟ್ಯಾಟೂ ಸ್ಟುಡಿಯೋದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ. |
ಜು. 7 | 24 | 15 ಲಕ್ಷ | ಆನ್‌ಲೈನ್ ಜೂಜಾಟ ಡಫಬೆಟ್‌ನಲ್ಲಿ 15 ಲಕ್ಷ ರೂ.ಗಳನ್ನು ಕಳೆದುಕೊಂಡ ನಂತರ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮ್ಯಾಂಚೆರಿಯಲ್‌ನ ಲಕ್ಷೆಟ್ಟಿಪೇಟೆಯ ಮೋಡೆಲಾ ಮೂಲದ ಮಧುಕರ್ (24) ಹೈದರಾಬಾದ್‌ನ ಕಾಲೇಜಿನಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದ. |
ಜು. 11 | 24 | -- | ವಿಶಾಖಪಟ್ಟಣಂ ಜಿಲ್ಲೆಯ ಕೊಟ್ಟೂರು ಗ್ರಾಮದ ದೋಡಿ ವೆಂಕಟ ಅರವಿಂದ್ ಅವರು ಆನ್‌ಲೈನ್ ಜೂಜಿನಲ್ಲಿ ಹಣ ಕಳೆದುಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. |
ಜೂ.27 | 24 | 10.5 ಲಕ್ಷ | ನಾಸಿಕ್‌ನ ಯುವಕ ಆನ್‌ಲೈನ್ ಜೂಜಿಗಾಗಿ ತಂದೆಯ ಖಾತೆಯಿಂದ 10.50 ಲಕ್ಷ ರೂ. ಕದ್ದಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಯಿತು. |
ಮಾ. 2 | 26 | 43ಸಾವಿರ | ಪೊಲೀಸ್ ಅಧಿಕಾರಿ ಕೆ.ಸರವಣನ್ (26) ಎಂಬವರು ರಮ್ಮಿ ಆಟದ ಮೂಲಕ ಸುಮಾರು 43 ಸಾವಿರ ರೂ. ಕಳೆದುಕೊಂಡರು. ಈ ಬಳಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು. |
|
2019ರಲ್ಲಿ, 41 ವರ್ಷದ ವೆಂಕಟ ಸುಬ್ರಮಣಿಯನ್ ಮತ್ತು ಪಟ್ಟು ಮೀನಾಕ್ಷಿ (33) ಎಂಬವರು ಐದು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾದರು. ಬಳಿಕ ಮಧುರೈ ಜಿಲ್ಲೆಯ ನಾಗಮಲೈನ ಥೆರೆಸಾ ಬೀದಿಯಲ್ಲಿ ವಾಸಿಸುತ್ತಿದ್ದರು. ಆದರೆ ರಮ್ಮಿ ಆನ್‌ಲೈನ್ ಜೂಜಿನ ಮೋಹಕ್ಕೆ ಒಳಗಾಗಿ ನಷ್ಟ ಉಂಟಾಗಿ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದರು.
2017ರಲ್ಲಿ, ಆಂಧ್ರಪ್ರದೇಶದ ವಿಜಯವಾಡದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಉದಯಮನ್ (32) ಎಂಬ ವ್ಯ್ಕತಿ ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ಅನೇಕ ಘಟನೆಗಳು ಆನ್‌ಲೈನ್ ಜೂಜಿನಿಂದ ನಡೆದಿದೆ.
ಭಾರತದಲ್ಲಿ ಜೂಜಿನ ವಿರುದ್ಧದ ಕಾನೂನುಗಳು: