ಕರ್ನಾಟಕ

karnataka

ETV Bharat / bharat

ದೇವರ ನಾಡಲ್ಲಿ ಕೊರೊನಾ ವಾರಿಯರ್ಸ್​ಗಳಿಗೆ ಹೂ ಮಳೆ ಸುರಿಸಿ ಗೌರವ ವಂದನೆ - ಹೆಲಿಕಾಪ್ಟರ್‌ಗಳ ಹೂ ಮಳೆ ಸುರಿಸುವ ಮೂಲಕ ಗೌರವ ವಂದನೆ

ಕೇರಳದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಕೊರೊನಾ ವಾರಿಯರ್ಸ್​ಗಳಿಗೆ ವಾಯುಸೇನೆಯಿಂದ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

Memorable day for Kerala's health workers
ಕೊರೊನಾ ವಾರಿಯರ್ಸ್​ಗಳಿಗೆ ಹೂ ಮಳೆ ಸುರಿಸಿ ಗೌರವ ವಂದನೆ

By

Published : May 3, 2020, 5:25 PM IST

ತಿರುವನಂತಪುರಂ: ಕೊಚ್ಚಿಯಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಕೊರೊನಾ ವಾರಿಯರ್ಸ್​ಗಳಿಗೆ ವಾಯುಸೇನೆ ಹೆಲಿಕಾಪ್ಟರ್‌ಗಳು ಹೂ ಮಳೆ ಸುರಿಸುವ ಮೂಲಕ ಗೌರವ ವಂದನೆ ಸಲ್ಲಿಸಿವೆ.

ಈ ಕುರಿತು ತಮ್ಮ ಅನುಭವ ಹಂಚಿಕೊಂಡ ತಿರುವನಂತಪುರಂ ಜನರಲ್ ಆಸ್ಪತ್ರೆಯ (ಟಿಜಿಹೆಚ್) ಪ್ಯಾರಾ ವೈದ್ಯಕೀಯ ಸಿಬ್ಬಂದಿ, ನಮಗೆ ನೀಡಲಾದ ಈ ಗೌರವವನ್ನು ಎಂದಿಗೂ ಮರೆಯುವುದಿಲ್ಲ. ಇದು ನಮಗೆ ದೊರೆತ ಅಭೂತಪೂರ್ವ ಗೌರವವಾಗಿದೆ ಎಂದರು.

ದಾದಿಯೊಬ್ಬರು ಪ್ರತಿಕ್ರಿಯಿಸಿದ್ದು, ನಾವು ನಿಜವಾಗಿಯೂ ಸಂತೋಷಪಡುತ್ತೇವೆ. ನಮ್ಮ ಕಠಿಣ ಪರಿಶ್ರಮಕ್ಕಾಗಿ ನಾವು ಗೌರವಿಸಲ್ಪಟ್ಟಿದ್ದೇವೆ ಮತ್ತು ಇದು ಇನ್ನೂ ಹೆಚ್ಚು ಶ್ರಮವಹಿಸುವ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಬೆಳಿಗ್ಗೆ 10 ಗಂಟೆಯ ಹೊತ್ತಿಗೆ, ಟಿಜಿಹೆಚ್‌ನ ಸಂಪೂರ್ಣ ಸಿಬ್ಬಂದಿ ಫ್ಲೈಪಾಸ್ಟ್‌ಗಾಗಿ ಆಸ್ಪತ್ರೆಯ ಮುಂದೆ ಕಾಯುತ್ತಿದ್ದರು. ಈ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ವಾಯುಸೇನಾ ಹೆಲಿಕಾಪ್ಟರ್ ಹೂ ಮಳೆ ಸುರಿಸಿದವು.

ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದವು. ಸ್ವೀಪರ್‌ಗಳಿಂದ ಹಿಡಿದು ಹಿರಿಯ ವೈದ್ಯರವರೆಗೆ ಇಡೀ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಯಿತು.

ಹೆಲಿಕಾಪ್ಟರ್ ಕಣ್ಮರೆಯಾದ ನಂತರ, ಎಲ್ಲಾ ಸಿಬ್ಬಂದಿ ಹೂವುಗಳನ್ನು ಸಂಗ್ರಹಿಸಿ ಅವರ ಹೃದಯದ ಹತ್ತಿರದಲ್ಲಿ ಹಿಡಿದಿಟ್ಟುಕೊಂಡ, ಸಂತೋಷ ಪಟ್ಟರು.

ಅದೇ ರೀತಿ ಕೊಚ್ಚಿಯಲ್ಲಿ, ದಕ್ಷಿಣ ನೌಕಾಪಡೆಯ ಉನ್ನತ ನೌಕಾಧಿಕಾರಿಗಳು ಎರ್ನಾಕುಲಂ ಜನರಲ್ ಆಸ್ಪತ್ರೆಯ ಸಿಬ್ಬಂದಿಗೆ ಶುಭಾಶಯ ಕೋರಲು ಮತ್ತು ಧನ್ಯವಾದ ಹೇಳಲು ಬಂದಿದ್ದರು. ನೌಕಾಪಡೆಯ ಉನ್ನತ ಅಧಿಕಾರಿಗಳು ಎಲ್ಲಾ ಸಿಬ್ಬಂದಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.

ABOUT THE AUTHOR

...view details