ಕರ್ನಾಟಕ

karnataka

ETV Bharat / bharat

ಪಾಕ್​ನಲ್ಲಿ ಅಪ್ರಾಪ್ತೆಯ ಬಲವಂತದ ಮತಾಂತರ: ವಿಶ್ವಸಂಸ್ಥೆ ಕಚೇರಿ ಎದುರು ಭಾರತೀಯರ ಪ್ರತಿಭಟನೆ - ಮೆಹೆಕ್‌ ಕುಮಾರಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ

ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ವಿವಾಹವಾಗಿದ್ದ ಅಪ್ರಾಪ್ತೆ ಮೆಹಕ್‌ ಕುಮಾರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಲಂಡನ್​ನ ಭಾರತೀಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

Members of Indian diaspora protest outside United Nations office in London
ಮೆಹೆಕ್‌ ಕುಮಾರಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ

By

Published : Feb 25, 2020, 11:39 AM IST

ಲಂಡನ್​​:ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡು ಸಿಂಧ್​​​ನಲ್ಲಿ ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದೂ ಅಪ್ರಾಪ್ತೆ ಮೆಹಕ್‌ ಕುಮಾರಿಗೆ ನ್ಯಾಯ ಒದಗಿಸುವಂತೆ ಭಾರತೀಯ ಮೂಲದ ಪ್ರಜೆಗಳು ಲಂಡನ್​​ನಲ್ಲಿ ವಿಶ್ವಸಂಸ್ಥೆಯ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೆಹೆಕ್‌ ಕುಮಾರಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ

ಪ್ರಕರಣದ ಹಿನ್ನೆಲೆ:

ಸಿಂಧ್‌ ಪ್ರಾಂತ್ಯದ ಜಾಕೋಬಾಬಾದ್‌ ನಿವಾಸಿಯಾಗಿದ್ದ 14 ವರ್ಷದ ಮೆಹೆಕ್‌ ಕುಮಾರಿಯನ್ನು ಆಲಿ ರಾಜಾ ಎಂಬ ಮಧ್ಯವಯಸ್ಕ ವ್ಯಕ್ತಿ ಜನವರಿ 15 ರಂದು ಅಪಹರಿಸಿದ್ದ. ಬಳಿಕ ಆಕೆಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ, ಅಂದೇ ವಿವಾಹ ಮಾಡಿಕೊಂಡಿದ್ದ. ಹೀಗಾಗಿ ಅವಳಿಗೆ ನ್ಯಾಯ ಒದಗಿಸುವಂತರ ಒತ್ತಾಯಿಸಿ ಲಂಡನ್​​ನಲ್ಲಿ ಪ್ರತಿಭಟನೆ ನಡೆಸಲಾಗ್ತಿದೆ.

ABOUT THE AUTHOR

...view details