ನವದೆಹಲಿ: ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು, ಶೇಖರಣಾ ಸಾಧನಗಳು ಮತ್ತು ಇತರ ಸಂಬಂಧಿತ ಉತ್ಪನ್ನಗಳನ್ನು "ಅಗತ್ಯ ಸರಕುಗಳು" ವಿಭಾಗದಲ್ಲಿ ಸೇರಿಸುವ ಮೂಲಕ ಮಾರಾಟ ಮಾಡಲು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಸೂಚಿಸಿದೆ ಎಂದು ತಿಳಿದು ಬಂದಿದೆ.
ಮೊಬೈಲ್ ಫೋನ್‌ಗಳನ್ನು ಅಗತ್ಯ ಸರಕುಗಳಲ್ಲಿ ಸೇರಿಸಲು ಒತ್ತಾಯ - ಗೃಹ ಸಚಿವಾಲಯದ ಅಜಯ್ ಕುಮಾರ್ ಭಲ್ಲಾ
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕಾರ್ಯದರ್ಶಿ ಅಜಯ್ ಸಾಹ್ನಿ ಅವರು ಏಪ್ರಿಲ್ 20 ರಂದು ಗೃಹ ಸಚಿವಾಲಯದ ಅಜಯ್ ಕುಮಾರ್ ಭಲ್ಲಾ ಅವರಿಗೆ ಮೊಬೈಲ್ ಸಾಧನಗಳನ್ನು ಅಗತ್ಯ ಸರಕುಗಳ ವಿಭಾಗದಲ್ಲಿ ಸೇರಿಸಲು ಪತ್ರ ಬರೆದಿದ್ದಾರೆ. ಮತ್ತು ಮನೆಯಿಂದ ಕೆಲಸಕ್ಕೆ ಬೆಂಬಲಿಸುವ ಅಗತ್ಯವಿರುವುದರಿಂದ ಐಟಿ ಹಾರ್ಡ್‌ವೇರ್ ಘಟಕಗಳನ್ನು ತಯಾರಿಸಲು ಅವಕಾಶ ನೀಡುತ್ತಾರೆ ಎಂದು ತಿಳಿದುಬಂದಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕಾರ್ಯದರ್ಶಿ ಅಜಯ್ ಸಾಹ್ನಿ ಅವರು ಏಪ್ರಿಲ್ 20 ರಂದು ಗೃಹ ಸಚಿವಾಲಯದ ಅಜಯ್ ಕುಮಾರ್ ಭಲ್ಲಾ ಅವರಿಗೆ ಮೊಬೈಲ್ ಸಾಧನಗಳನ್ನು ಅಗತ್ಯ ಸರಕುಗಳ ವಿಭಾಗದಲ್ಲಿ ಸೇರಿಸಲು ಪತ್ರ ಬರೆದಿದ್ದಾರೆ. ಮತ್ತು ಮನೆಯಿಂದ ಕೆಲಸಕ್ಕೆ (work from home) ಬೆಂಬಲಿಸುವ ಅಗತ್ಯವಿರುವುದರಿಂದ ಐಟಿ ಹಾರ್ಡ್‌ವೇರ್ ಘಟಕಗಳನ್ನು ತಯಾರಿಸಲು ಅವಕಾಶ ನೀಡುತ್ತಾರೆ ಎಂದು ತಿಳಿದುಬಂದಿದೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪ್ರಕಟಿಸಿದ ಮಾಹಿತಿಯ ಪ್ರಕಾರ ದೇಶದಲ್ಲಿ ಸುಮಾರು 97 ಪ್ರತಿಶತದಷ್ಟು ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ಮೊಬೈಲ್ ಸಾಧನಗಳ ಮೂಲಕ ಸಾಕರಗೊಳಿಸಲಾಗುತ್ತಿದೆ. ಈ ಹಿನ್ನಲೆ ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ಕೆಲಸ, ಸಂಪರ್ಕ, ತುರ್ತು ಸೇವೆಗಳು, ಕೊರೊನಾ ವೈರಸ್ ರೋಗಿಗಳ ಸೇವೆಗಳನ್ನು ಬೆಂಬಲಿಸುವುದು ಅತ್ಯಗತ್ಯವಾದ್ದರಿಂದ ಮೊಬೈಲ್ ಸಾಧನಗಳ ಮಾರಾಟ ಮತ್ತು ದುರಸ್ತಿಗೆ ಅವಕಾಶ ನೀಡುವಂತೆ ಇಂಡಸ್ಟ್ರಿ ಬಾಡಿ ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಮೀಟಿವೈ ಮತ್ತು ಗೃಹ ಸಚಿವಾಲಯವನ್ನು ಸಂಪರ್ಕಿಸಿದೆ.