ಜಮ್ಮು:ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ 2018ರ ಜನವರಿಯಿಂದ ಜೂನ್ವರೆಗೆ ಅಂದರೆ ಆರು ತಿಂಗಳಲ್ಲಿ ಬರೋಬ್ಬರಿ 82 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಮಾಹಿತಿ ಹಕ್ಕು ಅರ್ಜಿ ಮೂಲಕ ತಿಳಿದು ಬಂದಿದ್ದು, ಒಂದೇ ದಿನ 28 ಲಕ್ಷ ರೂ. ವೆಚ್ಚ ಮಾಡಿದ್ದಾರಂತೆ.
ಜಮ್ಮು-ಕಾಶ್ಮೀರ ಮೂಲದ ಸಾಮಾಜಿಕ ಕಾರ್ಯಕರ್ತೆ ಇನಾಮ್-ಉನ್-ನಬಿ ಸೌದಾಗರ್ ಸಲ್ಲಿಸಿದ ಆರ್ಟಿಐ ಅರ್ಜಿಯಲ್ಲಿ ಈ ಮಾಹಿತಿ ತಿಳಿದು ಬಂದಿದೆ. ಮೆಹಬೂಬಾ ಮುಫ್ತಿ ಶ್ರೀನಗರದ ಗುಪ್ಕರ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದ ನವೀಕರಣಕ್ಕಾಗಿ ಸುಮಾರು 82 ಲಕ್ಷ ರೂ. ಖರ್ಚು ಮಾಡಿದ್ದಾರೆ. ಈ ಹಣ ಭಾರತ ಸರ್ಕಾರ ಪಾವತಿ ಮಾಡಿದ್ದಾಗಿ ಮಾಹಿತಿ ಬಹಿರಂಗಗೊಂಡಿದೆ.
ಓದಿ: ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಕೊಂದು, ಪೊಲೀಸ್ ಠಾಣೆಗೆ ಹೋದ ಯುವತಿ!
ಹೊಸ ನಿವಾಸಕ್ಕಾಗಿ ಪೀಠೋಪಕರಣಗಳು, ಟಿವಿಗಳು ಮತ್ತು ಇತರ ವಸ್ತುಗಳಿಗಾಗಿ ಮುಫ್ತಿ ಇಷ್ಟೊಂದು ಹಣ ಖರ್ಚು ಮಾಡಿದ್ದಾರೆ. ಜೂನ್ 2018ರಲ್ಲೇ ಅವರು 22 ಲಕ್ಷ ರೂ. ಮೌಲ್ಯದ ಎಲ್ಇಡಿ ಟಿವಿ ಹಾಗೂ ಇತರೆ ವಿವಿಧ ವಸ್ತುಗಳನ್ನು ಖರೀದಿ ಮಾಡಿದ್ದು, ಮಾರ್ಚ್ 2018ರಲ್ಲಿ ಒಂದೇ ದಿನ ರತ್ನಗಂಬಳಿ ಖರೀದಿಗಾಗಿ 28 ಲಕ್ಷ ರೂ. ವ್ಯಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಜತೆಗೆ 11,62,000 ರೂ.ಗಳ ಬೆಡ್ಶೀಟ್ 2018ರ ಫೆಬ್ರವರಿ 22ರಂದು ಖರೀದಿ ಮಾಡಿದ್ದು, ಆಗಸ್ಟ್ 2016ರಿಂದ ಜುಲೈ 2018ರವರೆಗೆ ಎರಡು ವರ್ಷಗಳ ಅವಧಿಯಲ್ಲಿ 40 ಲಕ್ಷ ರೂಪಾಯಿ ಮೌಲ್ಯದ ಕಟ್ಲರಿ ವಸ್ತು ಸಹ ಖರೀದಿ ಮಾಡಿದ್ದಾರೆ. ಇದು ಕೇಂದ್ರ ಸರ್ಕಾರದ ಹಣ ಎಂಬುದು ಇದೀಗ ಬಹಿರಂಗಗೊಂಡಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಅವರನ್ನ ಗೃಹ ಬಂಧನದಲ್ಲಿ ಇಡಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ರಿಲೀಸ್ ಮಾಡಲಾಗಿದೆ.