ಕರ್ನಾಟಕ

karnataka

ETV Bharat / bharat

ಮೇಘಾಲಯಕ್ಕೂ ಹಬ್ಬಿದ 'ಪೌರತ್ವ'ದ ಕಿಚ್ಚು... ರಾಜಧಾನಿಯಲ್ಲಿ ಕರ್ಫ್ಯೂ ಜಾರಿ, ಇಂಟರ್​​ನೆಟ್​​ ಬಂದ್​​​​ - ಮೇಘಾಲಯದಲ್ಲಿ ಇಂಟರ್​ನೆಟ್ ಸ್ಥಗಿತ

ಮುಂಜಾಗ್ರತಾ ಕ್ರಮವಾಗಿ ಮೇಘಾಲಯ ರಾಜ್ಯದಲ್ಲಿ ಎಸ್​ಎಂಎಸ್ ಹಾಗೂ ಇಂಟರ್​ನೆಟ್ ಸೇವೆಯನ್ನು ಮುಂದಿನ ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.

Meghalaya Snaps Mobile Internet, Curfew In Shillong Amid Citizenship Bill Protests
ಮೇಘಾಲಯಕ್ಕೂ ಹಬ್ಬಿದ 'ಪೌರತ್ವ' ಕಿಚ್ಚು

By

Published : Dec 13, 2019, 8:43 AM IST

ಶಿಲ್ಲಾಂಗ್(ಮೇಘಾಲಯ):ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ನಡೆಯುತ್ತಿರುವ ಹೋರಾಟ ಸದ್ಯ ಮೇಘಾಲಯಕ್ಕೂ ವ್ಯಾಪಿಸಿದೆ. ಒಂದೆಡೆ ಅಸ್ಸೋಂ ಹೊತ್ತಿ ಉರಿಯುತ್ತಿದ್ದರೆ, ಮೇಘಾಲಯಕ್ಕೂ ಈ ಕಿಚ್ಚು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಮೇಘಾಲಯ ರಾಜ್ಯದಲ್ಲಿ ಎಸ್​ಎಂಎಸ್ ಹಾಗೂ ಇಂಟರ್​ನೆಟ್ ಸೇವೆಯನ್ನು ಮುಂದಿನ ಎರಡು ದಿನಗಳಿಗೆ ಸ್ಥಗಿತಗೊಳಿಸಲಾಗಿದೆ. ಅಸ್ಸೋಂನಲ್ಲಿ ತೆಗೆದುಕೊಂಡಂತೆ ಇಲ್ಲೂ ಸಹ ಎಚ್ಚರಿಕೆ ವಹಿಸಲಾಗಿದೆ.

ಪೌರತ್ವ ತಿದ್ದುಪಡಿ ಮಸೂದೆಗೆ ರಾಮ್ ನಾಥ್ ಕೋವಿಂದ್ ಅಂಕಿತ

ಮೇಘಾಲಯ ರಾಜಧಾನಿ ಶಿಲ್ಲಾಂಗ್​​ನಲ್ಲಿ ಅನಿರ್ದಿಷ್ಟಾವಧಿಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಶಿಲ್ಲಾಂಗ್​ನಲ್ಲಿ ಎರಡು ಕಾರಿಗೆ ಬೆಂಕಿ ಹಾಕಲಾಗಿದೆ. ಬೃಹತ್ ಮಟ್ಟದಲ್ಲಿ ಟಾರ್ಚ್​ಲೈಟ್ ಜಾಥಾ ಮೇಘಾಲಯದ ರಾಜಧಾನಿಯಲ್ಲಿ ಈಗಾಗಲೇ ನಡೆದಿದೆ.

ಗಾಳಿ ಸುದ್ದಿಗೆ ಕಿವಿಗೊಡದಂತೆ ಮೇಘಾಲಯ ಪೊಲೀಸರು ಟ್ವಿಟರ್​ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಪ್ರತಿಭಟನೆಯನ್ನು ತಹಬದಿಗೆ ತರುವ ಕೆಲಸವನ್ನೂ ಪೊಲೀಸರು ಮಾಡುತ್ತಿದ್ದಾರೆ.

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಪೊಲೀಸರ ಗುಂಡಿಗೆ ಇಬ್ಬರು ಬಲಿ

ABOUT THE AUTHOR

...view details