ಗುವಾಹಟಿ / ಶಿಲ್ಲಾಂಗ್:ಈಶಾನ್ಯ ಭಾರತದ ಎಂಟು ರಾಜ್ಯಗಳಲ್ಲಿ ಮೇಘಾಲಯ ಶೀಘ್ರದಲ್ಲೇ 6ನೇ ಕೊವಿಡ್ ಮುಕ್ತ ರಾಜ್ಯವಾಗಲಿದೆ, 11 ಕರೋನಾ ರೋಗಿಗಳಲ್ಲಿ 10 ವರದಿ ನೆಗೆಟಿವ್ ಬಂದಿವೆ.
ಅಸ್ಸೋಂನ 42 ಪಾಸಿಟಿವ್ ಪ್ರಕರಣಗಳಲ್ಲಿ ಈಗ ಬರೀ 9 ಪ್ರಕರಣಗಳು ಮಾತ್ರ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಕ್ರಿಯವಾಗಿರುವ 11 ಪ್ರಕರಣಗಳಲ್ಲಿ 10 ಪ್ರಕರಣಗಳನ್ನು ಮರುಪರಿಶೀಲಿಸಲಾಗಿದೆ. ಅವರ ಸ್ವ್ಯಾಬ್ ಮಾದರಿಗಳು ಋಣಾತ್ಮಕವೆಂದು ಕಂಡುಬಂದಿದೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಶಿಲ್ಲಾಂಗ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಇನ್ನು 11 ನೇ ರೋಗಿಯ ಎರಡನೇ ಬಾರಿಯ ಪರೀಕ್ಷೆಯು ನೆಗೆಟಿವ್ ಬಂದಿದೆ. 24 ಗಂಟೆಗಳ ಒಳಗೆ ಮತ್ತೊಂದು ಪರೀಕ್ಷೆಯನ್ನು ಮಾಡಲಾಗುವುದು ಮತ್ತು ಅದೂ ಸಹ ನೆಗೆಟಿವ್ ಬಂದರೆ ಆ ರೋಗಿ ಕೊರೊನಾ ಮುಕ್ತ ಎಂದು ಘೋಷಿಸಲಾಗುವುದು ಎಂದು ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ಹೇಳಿದರು.
ಪರ್ವತ ರಾಜ್ಯದಲ್ಲಿ ಒಟ್ಟು 12 ಕೊವಿಡ್-19 ಪಾಸಿಟಿವ್ ಪ್ರಕರಣಗಳಿದ್ದು, ಅದರಲ್ಲಿ 11 ಪ್ರಕರಣ ಗುರುವಾರದ ತನಕ ಸಕ್ರಿಯವಾಗಿತ್ತು ಶುಕ್ರವಾರ ಅವರ ವರದಿ ನೆಗೆಟಿವ್ ಬಂದಿದೆ. ಈವರೆಗೆ ಒಬ್ಬ ವ್ಯಕ್ತಿ, ಒಬ್ಬ ವೈದ್ಯರು ಸಾವನ್ನಪ್ಪಿದ್ದಾರೆ. ಇನ್ನು ಈ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಿನವು ಕುಟುಂಬ ಸದಸ್ಯರು ಅಥವಾ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಎಂದು ಹೇಳಲಾಗಿದೆ.
ಗುವಾಹಟಿಯಲ್ಲಿ ಕೊರೊನಾದಿಂದ ಚೇತರಿಕೆ ಕಂಡ ಮೂರು ರೋಗಿಗಳಿದ್ದರೂ ಅವರನ್ನು ಶುಕ್ರವಾರ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಇನ್ನು ರಾಜ್ಯದಲ್ಲಿ ಕೇವಲ ಒಂಬತ್ತು ಸಕ್ರಿಯ ಪ್ರಕರಣಗಳು ಮಾತ್ರ ಉಳಿದಿದ್ದು ಅವರು ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಸ್ಸೋಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಸಿಕ್ಕಿಂ ಮತ್ತು ನಾಗಾಲ್ಯಾಂಡ್‌ನಿಂದ ಈವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಇನ್ನುಳಿದಂತೆ ಇತರ ಮೂರು ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ ಮತ್ತು ತ್ರಿಪುರ ಕಳೆದ ತಿಂಗಳು ಕೊರೊನಾ ವೈರಸ್ ಮುಕ್ತ ರಾಜ್ಯವಾಯಿತು.