ಕರ್ನಾಟಕ

karnataka

ETV Bharat / bharat

ಕಣಿವೆ ರಾಜ್ಯದಲ್ಲಿ ಭದ್ರತೆ: ಶ್ರೀನಗರದಲ್ಲಿ ಸೇನಾಧಿಕಾರಿಗಳ ಮಹತ್ವದ ಸಭೆ - ಆರ್ಟಿಕಲ್​ 370

ಶ್ರೀನಗರದಲ್ಲಿ ಗುಪ್ತಚರ ಮತ್ತು ಹಿರಿಯ ಸೇನಾಧಿಕಾರಿಗಳು ಮಹತ್ವದ ಸಭೆ ನಡೆಸಿದ್ದು, ಮಿಲಿಟರಿ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಲಾಗಿದೆ.

ಕೋರ್ ಗ್ರೂಪ್ ಆಫ್ ಇಂಟೆಲಿಜೆನ್ಸ್ & ಸೆಕ್ಯುರಿಟಿ ಏಜೆನ್ಸಿಗಳ ಸಭೆ

By

Published : Aug 6, 2019, 1:15 PM IST

ಶ್ರೀನಗರ:ಮಿಲಿಟರಿ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಲು ಕೋರ್ ಗ್ರೂಪ್ ಆಫ್ ಇಂಟೆಲಿಜೆನ್ಸ್ & ಸೆಕ್ಯುರಿಟಿ ಏಜೆನ್ಸಿಗಳ ಸಭೆ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹತ್ವದ ಸಭೆಯಲ್ಲಿ ಸೇನೆ, ಪೊಲೀಸ್ ಮತ್ತು ಅರೆಸೈನಿಕ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ಗುಪ್ತಚರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಣಬೀರ್ ಸಿಂಗ್, ಶಾಂತಿ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370 ಹಾಗು 35 (ಎ) ವಿಧಿಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಒಂದು ದಿನದ ನಂತರ ಈ ಸಭೆ ನಡೆದಿದೆ.

ABOUT THE AUTHOR

...view details