ಸೇಲ್ಸ್ಗರ್ಲ್ನಿಂದ ಹಿಡಿದು ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಇವರು ಆಂಧ್ರಪ್ರದೇಶ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ರಾಜಕೀಯ ನಾಯಕ ಪರಕಾಲ ಪ್ರಭಾಕರರನ್ನು ಮದುವೆಯಾಗಿ ತೆಲುಗು ಮನೆಯ ಸೊಸೆಯಾದರು. ಕೇಂದ್ರ ಸಚಿವೆ ನಿರ್ಮಲಾ ಅವರ ತಂದೆ ರೈಲ್ವೇ ಇಲಾಖೆಯ ಉದ್ಯೋಗಿಯಾಗಿದ್ದರೂ ತಮ್ಮ ಶ್ರಮದ ಮೂಲಕವೇ ಗುರುತಿಸಿಕೊಂಡವರು.
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲದಿಂದ 1984ರಲ್ಲಿ ನಿರ್ಮಲಾ ಮಾಸ್ಟರ್ ಡಿಗ್ರಿ ಮುಗಿಸಿದರು. ಲಂಡನ್ ರೆಜೆಂಟ್ ಸ್ಟ್ರೀಟ್ನಲ್ಲಿರುವ ಗೃಹೋಪಯೋಗಿ ಶಾಪ್ನಲ್ಲಿ ಸೇಲ್ಸ್ಗರ್ಲ್ ಆಗಿ ಕೆಲಸ ಮಾಡಿದ್ದರು. ಬಳಿಕ ಯುಕೆಯಲ್ಲಿ ಅಗ್ರಿಕಲ್ಚರಲ್ ಇಂಜಿನಿರ್ಸ್ ಅಸೋಸಿಯೆಷನ್ನಲ್ಲಿ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿದ್ದರು. ವಾಜಪೇಯಿ ಸರ್ಕಾರದಲ್ಲಿ 2003ರಿಂದ 2005ರವರೆಗೆ ರಾಷ್ಟ್ರೀಯ ಮಹಿಳಾ ಕಮಿಷನ್ ಸದ್ಯಸರಾಗಿದ್ದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ರ ಚಿತ್ರ 2014ರಲ್ಲಿ ಪ್ರಧಾನಿಯಾಗಿ ಜವಾಬ್ದಾರಿ ತೆಗೆದುಕೊಂಡ ನರೇಂದ್ರ ಮೋದಿ ಅವರು ನಿರ್ಮಲಾ ಸೀತಾರಾಮನ್ ಕಾರ್ಯವನ್ನು ಗುರುತಿಸಿ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದರು. ಮೋದಿ ಅವರ ಮೊದಲ ಸರ್ಕಾರದಲ್ಲಿ ರಕ್ಷಣ ಸಚಿವರಾಗಿದ್ದ ಮನೋಹರ್ ಪರಿಕ್ಕರ್ 2017ರಲ್ಲಿ ಗೋವಾ ಸಿಎಂ ಆಗಿ ಜವಾಬ್ದಾರಿ ಸ್ವೀಕರಿಸಿದ್ದರಿಂದ ಈ ಸ್ಥಾನವನ್ನು ನಿರ್ಮಲಾ ಸೀತಾರಾಮನ್ರಿಗೆ ನೀಡಲಾಗಿತ್ತು. ಇಂದಿರಾ ಗಾಂಧಿ ಬಳಿಕ ರಕ್ಷಣಾ ಸಚಿವರಾಗಿದ್ದ ಕೀರ್ತಿ ಸೀತಾರಾಮಾನ್ರಿಗೆ ಸಲ್ಲುತ್ತದೆ. ಈಗ ಇವರು ನಮ್ಮ ರಾಜ್ಯದಿಂದ ರಾಜ್ಯಸಭಾ ಪ್ರತಿನಿಧಿಯಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಸೀತಾರಾಮನ್ ಟೀಂ ಹೀಗಿದೆ:
ಇನ್ನು ನಿರ್ಮಲಾ ಸೀತಾರಾಮನ್ ಬಜೆಟ್ ತಂಡದಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಕೆ. ಸುಬ್ರಮಣಿಯನ್,ಫೈನಾನ್ಸ್ ಮತ್ತು ಆರ್ಥಿಕ ಕಾರ್ಯದರ್ಶಿಸುಭಾಷ್ ಗಾರ್ಗ್,ರೆವನ್ಯೂ ಕಾರ್ಯದರ್ಶಿಅಜಯ್ ಭೂಷಣ್ ಪಾಂಡೆ,ಎಕ್ಸ್ಪೆಂಡಿಚರ್ ಸೆಕ್ರೇಟರಿಜಿಸಿ ಮುರ್ಮು,ಫೈನಾನ್ಶಿಯಲ್ ಸರ್ವಿಸಸ್ ಕಾರ್ಯದರ್ಶಿರಾಜೀವ್ ಕುಮಾರ್,ಡಿಐಪಿಎಎಂ ಕಾರ್ಯದರ್ಶಿಅತಾನು ಚಕ್ರವರ್ತಿಸೇರಿದಂತೆ ಇತರ ಪ್ರಮುಖರಿದ್ದಾರೆ.