ಕರ್ನಾಟಕ

karnataka

By

Published : May 5, 2020, 3:10 PM IST

ETV Bharat / bharat

ಕೊರೊನಾಕ್ಕೆ ಔಷಧ ಇಲ್ಲ...ನಕಲಿ ವೈದ್ಯನ ನಂಬದಂತೆ ಸರ್ಕಾರದ ಎಚ್ಚರಿಕೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿನ್ನೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಇಂತಹ ನಕಲಿ ವೈದ್ಯರ ಹಾವಳಿಯಿಂದ ದೂರವಿರಲು ಸೂಚಿಸಲಾಗಿದೆ. ಅಲ್ಲದೇ ತಮಿಳುನಾಡು ಸರ್ಕಾರ ಇಂಥವರ ಮಾಹಿತಿ ಕಲೆಹಾಕುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದೆ.

Medicine for COVID-19: Govt initiated action against Fake Siddha doctor
ನಕಲಿ ವೈದ್ಯನ ವಿಡಿಯೋ ವೈರಲ್​

ಚೆನ್ನೈ: ಚೆನ್ನೈನ ಕೊಯಂಬೇಡು ಬಸ್ ನಿಲ್ದಾಣದ ಬಳಿಯ ರತ್ನ ಸಿದ್ಧ ಆಸ್ಪತ್ರೆಯ ನಕಲಿ ವೈದ್ಯ ಕೆ.ತಿರುಥಾನಿಕಾಚಲಂ ಎಂಬುವವರು ಕೊರೊನಾ ಸೋಂಕಿಗೆ ಔಷಧ ಕಂಡು ಹಿಡದಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿ ಬಿಟ್ಟಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಇಲಾಖೆ ನಿನ್ನೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಇಂತಹ ನಕಲಿ ವೈದ್ಯರ ಹಾವಳಿಯಿಂದ ದೂರವಿರಲು ಸೂಚಿಸಲಾಗಿದೆ. ಅಲ್ಲದೇ ತಮಿಳುನಾಡು ಸರ್ಕಾರ ಇಂಥವರ ಮಾಹಿತಿ ಕಲೆಹಾಕುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದೆ.

ಕೇಂದ್ರ ಸಚಿವಾಲಯ ಕೋವಿಡ್​​-19 ಗೆ ಯಾವುದೇ ಔಷಧವಿದೆಯೆಂದು ಸ್ಪಷ್ಟಪಡಿಸಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಜನರ ಆರೋಗ್ಯವು ಮುಖ್ಯವಾಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಚೆನ್ನೈ ಪೊಲೀಸರಿಗೆ ದೂರು ನೀಡಲಾಗಿದ್ದು, ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ”ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details