ಚೆನ್ನೈ(ತಮಿಳುನಾಡು) :ತಮಿಳುನಾಡಿನಲ್ಲಿ ದೈನಂದಿನ ಕೊರೊನಾ ವೈರಸ್ ಸೋಂಕಿನ ಪ್ರಮಾಣ 3,000ಕ್ಕಿಂತಲೂ ಹೆಚ್ಚುತ್ತಿದೆ. ಈ ಹಿನ್ನೆಲೆ ತಜ್ಞ ವೈದ್ಯಕೀಯ ಸಮಿತಿ ಜೂನ್ 30ರ ನಂತರ ಲಾಕ್‌ಡೌನ್ ವಿಸ್ತರಣೆ ಶಿಫಾರಸು ಮಾಡಿಲ್ಲ ಎಂದು ಹೇಳಿದೆ.
ತಮಿಳುನಾಡಿನಲ್ಲಿ ಲಾಕ್‌ಡೌನ್ ವಿಸ್ತರಣೆ ಬೇಡವೆಂದ ವೈದ್ಯಕೀಯ ತಜ್ಞರ ಸಮಿತಿ
ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಲಾಕ್‌ಡೌನ್ ಏಕೈಕ ಮಾರ್ಗವಲ್ಲವಾದ್ದರಿಂದ ತಜ್ಞರ ಸಮಿತಿಯು ಲಾಕ್‌ಡೌನ್ ವಿಸ್ತರಣೆಯನ್ನು ಶಿಫಾರಸು ಮಾಡಿಲ್ಲ. ಸೋಂಕಿನ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸುವಂತೆ ಸೂಚಿಸಿದೆ..
ಸಮಿತಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದೆ. ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಲಾಕ್‌ಡೌನ್ ಏಕೈಕ ಮಾರ್ಗವಲ್ಲವಾದ್ದರಿಂದ ತಜ್ಞರ ಸಮಿತಿಯು ಲಾಕ್‌ಡೌನ್ ವಿಸ್ತರಣೆಯನ್ನು ಶಿಫಾರಸು ಮಾಡಿಲ್ಲ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ (ಎನ್‌ಐಇ) ಉಪನಿರ್ದೇಶಕ ಪ್ರಭ್ದೀಪ್ ಕೌರ್ ಹೇಳಿದ್ದಾರೆ.
ಈ ಶಿಫಾರಸು ಮಾಡುವಾಗ ಲಾಕ್‌ಡೌನ್‌ನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಕೂಡಾ ಸಮಿತಿ ಗಣನೆಗೆ ತೆಗೆದುಕೊಂಡಿದೆ ಎಂದು ಕೌರ್ ಹೇಳಿದ್ದಾರೆ. ಸೋಂಕಿನ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸುವಂತೆ ಸಮಿತಿ ಸೂಚಿಸಿದೆ.