ನವದೆಹಲಿ: ಎಫ್ - 16 ಯುದ್ಧ ವಿಮಾನವನ್ನ ಭಾರತದ ವಾಯುಪಡೆ ಹೊಡೆದುರುಳಿಸಿಲ್ಲ ಎಂದು ಪ್ರತಿಪಾದಿಸುತ್ತಿರುವ ಪಾಕಿಸ್ತಾನ ಸರ್ಕಾರ, ಭಾರತೀಯ ವಾಯುಪಡೆಯ 2ನೇ ವಿಮಾನವನ್ನ ಹೊಡೆದುರುಳಿಸಿರುವ ವಿಡಿಯೋ ರೆಕಾರ್ಡಿಂಗ್ ಏಕೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಬಿಡುಗಡೆ ಮಾಡಿಲ್ಲ ಎಂದು ಭಾರತ ವಿದೇಶಾಂಗ ಇಲಾಖೆ ಪ್ರಶ್ನಿಸಿದೆ.
ಭಾರತದ 2ನೇ ವಿಮಾನ ಪತನವಾಗಿದ್ದರೆ ವಿಡಿಯೋ ಯಾಕೆ ಬಿಡುಗಡೆ ಮಾಡಿಲ್ಲ...? - news kannada
ಎಫ್ - 16 ಯುದ್ಧ ವಿಮಾನವನ್ನ ಭಾರತದ ವಾಯುಪಡೆ ಹೊಡೆದುರುಳಿಸಿಲ್ಲ ಎಂದು ಪ್ರತಿಪಾದಿಸುತ್ತಿರುವ ಪಾಕಿಸ್ತಾನ ಸರ್ಕಾರದ ಹೇಳಿಕೆಗೆ ಭಾರತ ವಿದೇಶಾಂಗ ಇಲಾಖಾ ವಕ್ತಾರ ರವೀಶ್ ಕುಮಾರ್ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ನಾವು ಪ್ರತ್ಯಕ್ಷದರ್ಶಿಗಳು ಹಾಗೂ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನ ಕೊಟ್ಟಿದ್ದೇವೆ. ಪಾಕಿಸ್ತಾನ ವಾಯುಪಡೆ ಎಫ್- 16 ಏರ್ಕ್ರಾಫ್ಟ್ನ್ನು ಭಾರತದ ಮೇಲಿನ ದಾಳಿಗೆ ಬಳಿಸಿಕೊಂಡಿದೆ. ಮಿಗ್ -21 ಬೈಸನ್ ಪೈಲಟ್ ಅಭಿನಂದನ್ ವರ್ತಮಾನ್ ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಅಮೆರಿಕ ಸರ್ಕಾರದ ಜೊತೆಗೂ ನಾವು ಮಾತನಾಡಿದ್ದು, ಈ ಬಗ್ಗೆ ಪರಿಶೀಲನೆ ಮಾಡುವಂತೆ ಕೇಳಿಕೊಂಡಿದ್ದೇವೆ. ಎಫ್- 16 ಪಾಕಿಸ್ತಾನಕ್ಕೆ ನೀಡುವಾಗ ಮಾಡಿಕೊಂಡಿರುವ ಒಪ್ಪಂದವನ್ನೂ ನೆನಪಿಸಿದ್ದೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಒಂದೊಮ್ಮೆ ಪಾಕಿಸ್ತಾನ ನವ ಪಾಕಿಸ್ತಾನ ಎಂದು ತೋರಿಸಿಕೊಳ್ಳಲು ಬಯಸಿದರೆ ಗಡಿಯಾಚಿಗಿನ ಭಯೋತ್ಪಾದನೆ ಹಾಗೂ ಉಗ್ರರಿಗೆ ಬೆಂಬಲ ನೀಡುವುದನ್ನ ನಿಲ್ಲಿಸಬೇಕು ಹಾಗೂ ಸ್ಟ್ರಿಕ್ಟ್ ಆ್ಯಕ್ಷನ್ ತೆಗೆದುಕೊಳ್ಳಬೇಕು ಎಂದು ರವೀಶ್ ಕುಮಾರ್ ನರೆಯ ಶತ್ರುರಾಷ್ಟ್ರಕ್ಕೆ ಕೇಳಿಕೊಂಡಿದ್ದಾರೆ.