ಕರ್ನಾಟಕ

karnataka

ETV Bharat / bharat

ರೇಪ್​ ಕೇಸ್​ ಸಂಬಂಧ ಹೇಳಿಕೆ ನೀಡಿದ ಯುಎನ್​ ಅಧಿಕಾರಿ: ಅನಗತ್ಯ ಟೀಕೆ ಬೇಡ ಎಂದ ಭಾರತ - ಹಥ್ರಾಸ್​ ಕೇಸ್​ ಬಗ್ಗೆ ಯುನ್​ ಅಧಿಕಾರಿ ಟೀಕೆ

ಭಾರತದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ವಿಶ್ವಸಂಸ್ಥೆಯ ಅಧಿಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ "ಬಾಹ್ಯ ಏಜೆನ್ಸಿಯ ಯಾವುದೇ ಅನಗತ್ಯ ಟೀಕೆಗಳನ್ನು ತಪ್ಪಿಸುವುದು ಉತ್ತಮ" ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ
ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ

By

Published : Oct 6, 2020, 9:11 AM IST

ನವದೆಹಲಿ:ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಯುಎನ್ ರೆಸಿಡೆಂಟ್ ಸಂಯೋಜಕರ ಹೇಳಿಕೆಯನ್ನು ಭಾರತ ಅನಗತ್ಯ ಎಂದು ಸೋಮವಾರ ಹೇಳಿದೆ.

ಭಾರತದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ವಿಶ್ವಸಂಸ್ಥೆಯ ಅಧಿಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ "ಬಾಹ್ಯ ಏಜೆನ್ಸಿಯ ಯಾವುದೇ ಅನಗತ್ಯ ಟೀಕೆಗಳನ್ನು ತಪ್ಪಿಸುವುದು ಉತ್ತಮ" ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ. ಇನ್ನು ಈ ಬಗ್ಗೆ ತನಿಖಾ ಪ್ರಕ್ರಿಯೆಯು ಇನ್ನೂ ನಡೆಯುತ್ತಿದೆ ಎಂದು ಹೇಳಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ವಿಶ್ವಸಂಸ್ಥೆಯ ನಿವಾಸ ಸಂಯೋಜಕರೊಂದಿಗೆ ಮಾತನಾಡುತ್ತಾ, "ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಯುಎನ್ ರೆಸಿಡೆಂಟ್ ಕೋ-ಆರ್ಡಿನೇಟರ್ ಕೆಲವು ಅನಗತ್ಯ ಕಾಮೆಂಟ್​ಗಳನ್ನು ಮಾಡಿದ್ದಾರೆ. ಭಾರತದಲ್ಲಿಈ ಪ್ರಕರಣಗಳನ್ನು ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಯುಎನ್ ರೆಸಿಡೆಂಟ್ ಸಂಯೋಜಕರು ತಿಳಿದಿರಬೇಕು" ಎಂದಿದ್ದಾರೆ.

"ತನಿಖಾ ಪ್ರಕ್ರಿಯೆಯು ಇನ್ನೂ ನಡೆಯುತ್ತಿರುವುದರಿಂದ ಬಾಹ್ಯ ಏಜೆನ್ಸಿಯ ಯಾವುದೇ ಅನಗತ್ಯ ಕಾಮೆಂಟ್‌ಗಳನ್ನು ಪರಿಗಣಿಸುವುದಿಲ್ಲ. ಸಂವಿಧಾನವು ಭಾರತದ ಎಲ್ಲಾ ನಾಗರಿಕರಿಗೆ ಸಮಾನತೆಯನ್ನು ನೀಡುತ್ತದೆ. ಪ್ರಜಾಪ್ರಭುತ್ವವಾಗಿ ಎಲ್ಲರಿಗೂ ನ್ಯಾಯ ಒದಗಿಸುವ ಕಾರ್ಯ ಮಾಡುತ್ತದೆ" ಎಂದಿದ್ದಾರೆ.

ಉತ್ತರಪ್ರದೇಶದ ಹಥ್ರಾಸ್​ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಯುಎನ್​ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದರು.

ABOUT THE AUTHOR

...view details