ಕರ್ನಾಟಕ

karnataka

ETV Bharat / bharat

ಹಲಾಲ್​ ವಿವಾದದಲ್ಲಿ ಸಿಕ್ಕ ಮೆಕ್​ಡೊನಾಲ್ಡ್​: ಹಿಂದೂ ಸಂಪ್ರದಾಯದಂತೆ ಪ್ರಾಣಿ ವಧೆಗೆ ಆಗ್ರಹ - mcdonald

ತನ್ನ ರೆಸ್ಟೋರೆಂಟ್​ಗಳು ಹಲಾಲ್​ ಪ್ರಮಾಣ ಪತ್ರ ಹೊಂದಿದೆ ಎಂದು ಮೆಕ್​ ಡೊನಾಲ್ಡ್​ ಸಂಸ್ಥೆಯ ಅಧಿಕೃತವಾಗಿ ಘೋಷಿಸಿರುವ ವಿರುದ್ಧ ಹಲವರು ಸಿಟ್ಟಿಗೆದ್ದಿದ್ದು, ನಾವು ಇನ್ನು ಮುಂದೆ ನಿಮ್ಮ ರೆಸ್ಟೋರೆಂಟ್​ನಲ್ಲಿ ಮಾಂಸಾಹಾರ ಖರೀದಿಸುವುದಿಲ್ಲ ಎಂದು ಸಿಟ್ಟಿನಿಂದ ಟ್ವೀಟ್ ಮಾಡಿದ್ದಾರೆ.

By

Published : Aug 23, 2019, 5:45 PM IST

ನವದೆಹಲಿ:ತನ್ನ ಎಲ್ಲ ರೆಸ್ಟೋರೆಂಟ್​ಗಳೂ ಹಲಾಲ್​ ಪ್ರಮಾಣಪತ್ರ ಪಡೆದಿದೆ ಎಂದು ಮೆಕ್​ಡೊನಾಲ್ಡ್​ ಅಧಿಕೃತವಾಗಿ ಘೋಷಿಸಿ ಇಕ್ಕಟ್ಟಿಗೆ ಸಿಲುಕಿದೆ.

ಸಂಸ್ಥೆಯ ಅಧಿಕೃತ ಘೋಷಣೆ ವಿರುದ್ಧ ಹಲವರು ಸಿಟ್ಟಿಗೆದ್ದಿದ್ದು, ನಾವು ಇನ್ನು ಮುಂದೆ ನಿಮ್ಮ ರೆಸ್ಟೋರೆಂಟ್​ನಲ್ಲಿ ಮಾಂಸಾಹಾರ ಖರೀದಿಸುವುದಿಲ್ಲ ಎಂದು ಸಿಟ್ಟಿನಿಂದ ಟ್ವೀಟ್ ಮಾಡಿದ್ದಾರೆ.

ಅಧಿಕೃತವಾಗಿ ಘೋಷಿಸಿದ್ದಕ್ಕೆ ಧನ್ಯವಾದ ಇನ್ನುಮುಂದೆ ಎಂಸಿಡಿ ಆಹಾರಗಳನ್ನು ಖರೀದಿಸುವುದಿಲ್ಲ ಎಂದು ಕೆಲವರು ಟ್ವೀಟ್​ ಮಾಡಿದ್ದಾರೆ.

ಹಲಾಲ್​ ಮಾಂಸ ನಮಗೆ ಬೇಡ ಝಟ್ಕಾ ಮೀಟ್​ (ಹಿಂಧೂ ಸಂಪ್ರದಾಯದ ಪ್ರಕಾರನ ಕತ್ತಿಯಲ್ಲಿ ಒಂದೇ ಏಟಿಗೆ ಪ್ರಾಣಿಗಳ ವಧೆ ಮಾಡುವುದು) ಮಾತ್ರ ನಾವು ತಿನ್ನುತ್ತೇವೆ ಎಂದು ಇನ್ನೂ ಕೆಲವರು ಟ್ವೀಟ್​ ಮಾಡಿದ್ದಾರೆ.

ಹಲಾಲ್​ ಎಂಬುದು ಪ್ರಾಣಿಗಳನ್ನು ವಿಕೃತವಾಗಿ ಕೊಲ್ಲುವ ಒಂದು ವಿಧಾನ ಎಂದು ಇನ್ನೂ ಕೆಲವರು ಪೋಸ್ಟ್​ ಮಾಡಿದ್ದಾರೆ.

ಟ್ವಿಟರ್​ನಲ್ಲಿ ಈ ವಿಷಯ ಟ್ರೆಂಡ್​ ಆಗಿದ್ದು, ಕೆಲವರು ವಿರೋಧವಾಗಿ ಮಾತನಾಡಿದರೆ, ಇನ್ನೂ ಕೆಲವರು ಪರವಾಗಿ ಮಾತನಾಡಿದ್ದಾರೆ.

ಈಚೆಗಷ್ಟೇ ಹಿಂಧೂಯೇತರ ಡೆಲಿವರಿ ಬಾಯ್​ನಿಂದ ಆಹಾರ ಸ್ವೀಕರಿಸಲು ಗ್ರಾಹಕರಿಗೆ ನಿರಾಕರಿಸಿದ್ದ ಕಾರಣ ಜೊಮೆಟೊ ಹಾಗೂ ಉಬರ್​ ಈಟ್ಸ್​ ಸಂಸ್ಥೆಯು ಆಹಾರಕ್ಕೆ ಯಾವುದೇ ಧರ್ಮವಿಲ್ಲ. ಆಹಾರವೇ ಒಂದು ಧರ್ಮ ಎಂದು ನೀತಿ ಪಾಠ ಮಾಡಿದ್ದವು.

ABOUT THE AUTHOR

...view details