ಕರ್ನಾಟಕ

karnataka

ETV Bharat / bharat

ಬಿಎಸ್ಪಿಯಲ್ಲಿ ಪ್ರತಿ ಟಿಕೆಟ್ ಬೆಲೆ 15 ಕೋಟಿ...! ಮೇನಕಾ ಗಾಂಧಿ ಗಂಭೀರ ಆರೋಪ - ಮೇನಕಾ ಗಾಂಧಿ

ಮಾಯಾವತಿ ಟಿಕೆಟ್ ಅನ್ನು ಮಾರಾಟ ಮಾಡೋದು ಎಲ್ಲರಿಗೂ ತಿಳಿದಿರುವ ವಿಚಾರ. ಬಿಎಸ್ಪಿ ಮುಖ್ಯಸ್ಥೆ 77 ಮನೆಯನ್ನು ಹೊಂದಿದ್ದಾರೆ. ಟಿಕೆಟ್​ಗೆ ಪ್ರತಿಯಾಗಿ ಮಾಯಾವತಿ ಹಣದ ಹೊರತಾಗಿ ವಜ್ರವನ್ನು ಪಡೆಯುತ್ತಾರೆ ಎನ್ನುವುದನ್ನು ಮನೆಯವರೂ ಒಪ್ಪಿಕೊಂಡಿದ್ದಾರೆ ಎಂದು ಸುಲ್ತಾನ್​ಪುರದಲ್ಲಿ ಮೇನಕಾ ಗಾಂಧಿ ಹೇಳಿದ್ದಾರೆ.

ಮೇನಕಾ ಗಾಂಧಿ

By

Published : Apr 4, 2019, 10:01 AM IST

ನವದೆಹಲಿ:ಕೇಂದ್ರ ಸಚಿವೆ ಮೇನಕಾ ಗಾಂಧಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದ್ದು ಮಾಯಾವತಿ, ಪಾರ್ಟಿ ಟಿಕೆಟ್​ ಅನ್ನು ಹಣಕ್ಕಾಗಿ ಮಾರುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮಾಯಾವತಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರತಿ ಟಿಕೆಟ್ ಅನ್ನು ​​ಬರೋಬ್ಬರಿ 15 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಮನೇಕಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಮಾಯಾವತಿ ಟಿಕೆಟ್ ಅನ್ನು ಮಾರಾಟ ಮಾಡೋದು ಎಲ್ಲರಿಗೂ ತಿಳಿದಿರುವ ವಿಚಾರ. ಬಿಎಸ್ಪಿ ಮುಖ್ಯಸ್ಥೆ 77 ಮನೆಯನ್ನು ಹೊಂದಿದ್ದಾರೆ. ಟಿಕೆಟ್​ಗೆ ಪ್ರತಿಯಾಗಿ ಮಾಯಾವತಿ ಹಣದ ಹೊರತಾಗಿ ವಜ್ರವನ್ನು ಪಡೆಯುತ್ತಾರೆ ಎನ್ನುವುದನ್ನು ಮನೆಯವರೂ ಒಪ್ಪಿಕೊಂಡಿದ್ದಾರೆ ಎಂದು ಸುಲ್ತಾನ್​ಪುರದಲ್ಲಿ ಮೇನಕಾ ಗಾಂಧಿ ಹೇಳಿದ್ದಾರೆ.

ಉಚಿತವಾಗಿ ಟಿಕೆಟ್​​ ಅನ್ನು ಮಾಯಾವತಿ ನೀಡೋದೇ ಇಲ್ಲ. 15 ಕೋಟಿ ನೀಡಿದರೆ ಮಾತ್ರ ದೊರೆಯುತ್ತದೆ. ಆದರೆ 15 ಕೋಟಿಯನ್ನು ಹೇಗೆ ಸಂಪಾದಿಸೋದು ಎನ್ನುವುದನ್ನು ಮನೇಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ABOUT THE AUTHOR

...view details