ಕರ್ನಾಟಕ

karnataka

ETV Bharat / bharat

ಈಸ್ಟರ್ ಹಬ್ಬದ ಶುಭ ಕೋರಿದ ಪಿಎಂ.. ಕೊರೊನಾ ವಿರುದ್ಧ ಜಯಗಳಿಸಲು ಶಕ್ತಿ ನೀಡುವಂತೆ ಮೋದಿ ಪ್ರಾರ್ಥನೆ.. - narendra modi twitter

ಈ ಈಸ್ಟರ್ ಕೋವಿಡ್​-19 ಯಶಸ್ವಿಯಾಗಿ ಜಯಿಸಲು ಮತ್ತು ಆರೋಗ್ಯಕರ ದೇಶ ರಚಿಸಲು ನಮಗೆ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಪ್ರಧಾನಿ ಮೋದಿ ಟ್ಟೀಟ್​ ಮಾಡಿದ್ದಾರೆ.

may-this-easter-give-us-added-strength-to-successfully-overcome-covid-19-pm
ಪ್ರಧಾನ ಮಂತ್ರಿ ನರೇಂದ್ರ ಮೋದಿ

By

Published : Apr 12, 2020, 10:40 AM IST

ನವದೆಹಲಿ :ಟ್ವೀಟ್​ ಮೂಲಕ ಕ್ರೈಸ್ತ ಮತೀಯರ ಮುಖ್ಯ ಈಸ್ಟರ್​ ಹಬ್ಬದ ಶುಭಾಶಯ ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್​​​-19 ಮಹಾಮಾರಿಯ ವಕ್ರದೃಷ್ಟಿಯಿಂದ ಯಶಸ್ವಿಯಾಗಿ ಹೊರಬರಲು ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ದೇಶದಲ್ಲಿ ಕೊರೊನಾ ಮಿತಿಮೀರಿ ವ್ಯಾಪಿಸುತ್ತಿದೆ. ಕೋವಿಡ್-19​ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿದೆ. ಈ ನಿಟ್ಟಿನಲ್ಲಿಂದು ನಾಡಿನ ಜನತೆಗೆ ಈಸ್ಟರ್​ ಹಬ್ಬದ ಶುಭ ಕೋರಿರುವ ಪಿಎಂ ''ಎಲ್ಲರಿಗೂ ಈಸ್ಟರ್ ವಿಶೇಷ ದಿನದ ಶುಭಾಶಯಗಳು, ಈ ಸಂದರ್ಭದಲ್ಲಿ ದೈವ ಮಾನವ ಕ್ರಿಸ್ತನ ಉದಾತ್ತ ಆಲೋಚನೆಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ, ವಿಶೇಷವಾಗಿ ಬಡವರು ಮತ್ತು ನಿರ್ಗತಿಕರನ್ನು ಸಬಲೀಕರಣಗೊಳಿಸುವ ಅವರ ಅಚಲ ಬದ್ಧತೆಗೆ. ಈ ಈಸ್ಟರ್ ಕೋವಿಡ್​-19 ಯಶಸ್ವಿಯಾಗಿ ಜಯಿಸಲು ಮತ್ತು ಆರೋಗ್ಯಕರ ದೇಶ ರಚಿಸಲು ನಮಗೆ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಟ್ಟೀಟ್​ ಮಾಡಿದ್ದಾರೆ.

ABOUT THE AUTHOR

...view details