ಕರ್ನಾಟಕ

karnataka

ETV Bharat / bharat

ಪ್ರಮುಖ ಮಾವೋ ನಾಯಕನ ಸೆರೆ... ಸುಳಿವುಕೊಟ್ಟವರಿಗೆ ಘೋಷಿಸಲಾಗಿತ್ತು 4 ಲಕ್ಷ ರೂ. ಬಹುಮಾನ

ಮಾವೋವಾದಿ ಪ್ರಮುಖ ನಾಯಕ​ನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದ್ದು, ಆತನಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶದ ವಿವಿಧ ವಿವಾದಗಳಲ್ಲಿ 100 ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ.

andhra
andhra

By

Published : Sep 30, 2020, 8:11 PM IST

ಆಂಧ್ರ ಪ್ರದೇಶ: ಮಾವೋವಾದಿ ಪ್ರಮುಖ ನಾಯಕ ಜೆಮ್ಮಿಲಿ ಕಾಮೇಶ್​ನನ್ನು ಆಂಧ್ರಪ್ರದೇಶದ ವಿಶಾಖಾ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತನ ಸುಳಿವು ನೀಡಿದವರಿಗೆ 4 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಮೊದಲಿಗೆ ಆತ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದರೂ, ತಪ್ಪಿಸಿಕೊಂಡ. ಬಳಿಕ ಗುಡೇಮ್ ಕೊಥವೀಧಿ ಮಂಡಲದ ಅರಣ್ಯ ಪ್ರದೇಶದಲ್ಲಿ ಮಾವೋವಾದಿ ಆತ ಇದ್ದಾನೆ ಎಂಬ ಖಚಿತ ಮಾಹಿತಿಯೊಂದಿಗೆ ಪೊಲೀಸರು ಕಾಮೇಶ್‌ನನ್ನು ಬಂಧಿಸಿದ್ದಾರೆ.

ಕಾಮೇಶ್ ಮಾವೊಯಿಸ್ಟ್ ಪಾರ್ಟಿಯಲ್ಲಿ 14 ವರ್ಷಗಳ ಕಾಲ ವಿವಿಧ ಕಾರ್ಯಕರ್ತನಾಗಿ ಕೆಲಸ ಮಾಡಿದ್ದ. ಆಂಧ್ರಪ್ರದೇಶದ ವಿವಿಧ ವಿವಾದಗಳಲ್ಲಿ 100 ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ.

ಕಾಮೆಶ್ ವಿರುದ್ಧ 5 ಕೊಲೆ, 4 ಸ್ಫೋಟ, 7 ಫೈರ್ ಎಕ್ಸ್‌ಚೇಂಜ್ ಕೇಸ್ ಮತ್ತು ಇತರ ಸಣ್ಣ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪೊಲೀಸರು ಕಾಮೇಶ್​ನಿಂದ 3 ರೈಫಲ್‌ಗಳು, 20 ಸುತ್ತು ಗುಂಡುಗಳು, 3 ಕ್ಯಾರೇಜ್ ಗಣಿಗಳು, 50 ಕೆಜಿ ಜೆಲಾಟಿನ್ ಸ್ಟಿಕ್‌ಗಳು, 200 ಮೀಟರ್ ವಿದ್ಯುತ್ ತಂತಿ ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details