ನವದೆಹಲಿ:ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಇನ್ನೂ ಕೂಡಾ ಸರ್ಕಾರಿ ಪ್ರಯೋಗಾಲಯದಿಂದ ಕೋವಿಡ್-19 ಪರೀಕ್ಷಾ ವರದಿಯನ್ನು ಸಲ್ಲಿಸಿಲ್ಲ ಎಂದು ದೆಹಲಿ ಪೊಲೀಸರ ಅಪರಾಧ ವಿಭಾಗ ಹೇಳಿದೆ.
ಮೌಲಾನಾ ಸಾದ್ ವಿರುದ್ಧ ಎಫ್‌ಐಆರ್ ದಾಖಲಾಗಿ ಎರಡು ತಿಂಗಳಾಗಿದ್ದರೂ, ಆತನ ಪರೀಕ್ಷಾ ವರದಿಯನ್ನು ಸ್ವೀಕರಿಸಿದ ಬಳಿಕವೇ ಅಪರಾಧ ವಿಭಾಗವು ಸಾದ್ನನ್ನು ವಿಚಾರಣೆಗೆ ಕರೆಯಲಿದೆ.