ಹೊಸದಿಲ್ಲಿ: ದೇಶಾದ್ಯಂತ ಕೊರೊನಾ ವೈರಸ್ ಹರಡಲು ಕಾರಣನಾದ ಆರೋಪಿ, ತಬ್ಲೀಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಕಂಧಲಾವಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ತಂಡವು ಮೌಲಾನಾಗಾಗಿ ದೆಹಲಿ ಹಾಗೂ ಉತ್ತರ ಪ್ರದೇಶದ ಹಲವಾರು ಸ್ಥಳಗಳಲ್ಲಿ ದಾಳಿಗಳನ್ನು ಮುಂದುವರೆಸಿದೆ. ಮೌಲಾನಾಗೆ ಹತ್ತಿರದ ಮೂಲಗಳ ಪ್ರಕಾರ, ಕೊರೊನಾ ವೈರಸ್ ಭಯದಿಂದ ಅವರು ಸ್ವಯಂ ಕ್ವಾರಂಟೈನ್ ವಿಧಿಸಿಕೊಂಡು ರಹಸ್ಯ ಸ್ಥಳದಲ್ಲಿ ಅವಿತುಕೊಂಡಿದ್ದಾರೆ ಎನ್ನಲಾಗಿದೆ.
ತಲೆಮರೆಸಿಕೊಂಡ ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ಗಾಗಿ ಪೊಲೀಸರ ಹುಡುಕಾಟ - ಲಾಕ್ಡೌನ್
ಕೊರೊನಾ ವೈರಸ್ ನಮ್ಮನ್ನೇನೂ ಮಾಡಲಾರದು ಎಂದು ತನ್ನ ಅನುಯಾಯಿಗಳಿಗೆ ಬ್ರೇನ್ವಾಶ್ ಮಾಡುತ್ತ, ಲಾಕ್ಡೌನ್ ಇದ್ದರೂ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ ಆರೋಪಿ ಮೌಲಾನಾ ಸಾದ್ ತಲೆಮರೆಸಿಕೊಂಡಿದ್ದು, ಪೊಲೀಸರು ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ.
Maulana Saad in quarantine,
ಉತ್ತರ ಪ್ರದೇಶದ ಮುಜಪ್ಫರ್ ನಗರ ಹಾಗೂ ಶಾಮ್ಲಿ ಜಿಲ್ಲೆಗಳಲ್ಲಿ ಅಲ್ಲಿನ ಸ್ಥಳೀಯ ಪೊಲೀಸರ ನೆರವಿನೊಂದಿಗೆ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ದಾಳಿ ನಡೆಸಿದ್ದಾರೆ. ದೆಹಲಿಯ ಜಾಕೀರ್ ನಗರ ಹಾಗೂ ನಿಜಾಮುದ್ದೀನ್ ಪ್ರದೇಶಗಳಲ್ಲಿರುವ ಮೌಲಾನಾಗೆ ಸೇರಿದ ಮೂರು ಮನೆಗಳಲ್ಲೂ ಶೋಧ ನಡೆಸಲಾಗಿದೆ.
ಲಾಕ್ಡೌನ್ ನಡುವೆಯೂ ನಿಯಮ ಉಲ್ಲಂಘಿಸಿ, ಸಾವಿರಾರು ಜನರನ್ನು ಸೇರಿಸಿ ತಬ್ಲೀಘಿ ಜಮಾತ್ ಮುಸ್ಲಿಂ ಸಮಾವೇಶ ನಡೆಸುವುದರ ಮೂಲಕ ದೇಶಾದ್ಯಂತ ಸಾವಿರಾರು ಜನರಿಗೆ ಕೊರೊನಾ ಸೋಂಕು ಹರಡುವಂತೆ ಮಾಡಿದ ಆರೋಪಿ ಮೌಲಾನಾ ಸಾದ್ ವಿರುದ್ಧ ವಿವಿಧ ಕಾಯ್ದೆಗಳಡಿ ಎಫ್ಐಆರ್ ದಾಖಲಾಗಿವೆ.