ಮೆಹಬೂಬ್‌ನಗರ(ತೆಲಂಗಾಣ):ಆ ಮನೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಕಾರ್ಯಕ್ರಮ ನಡೆಯಲಿತ್ತು. ಆದರೆ, ಕಳ್ಳರ ವಕ್ರದೃಷ್ಟಿಗೆ ಮದುವೆ ಮನೆಯವರು ಚಿಂತಾಕ್ರಾಂತರಾಗಿದ್ದಾರೆ. ಬರೋಬ್ಬರಿ 1 ಕೋಟಿ. ರೂ ಮೌಲ್ಯದ ಚಿನ್ನವನ್ನು ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ.
ಮೆಹಬೂಬ್‌ನಗರ ಜಿಲ್ಲೆಯ ಮಿಡ್ಜಿಲ್ ಮಂಡಲ್ನ ಬೋನಪಲ್ಲಿ ನಿವಾಸಿ ಇಂದ್ರ ರೆಡ್ಡಿ ಮನೆಯಲ್ಲಿ ವಿವಾಹ ಸಂಭ್ರಮ ಮನೆ ಮಾಡಿತ್ತು. ಇದೇ ಡಿಸೆಂಬರ್ 23 ರಂದು ನಡೆಯಲಿರುವ ಮದುವೆಗೆ ಮನೆಯವರು ಸುಮಾರು 2 ಕೆಜಿಯಷ್ಟು ಚಿನ್ನಾಭರಣಗಳನ್ನು ತಂದು ಬೀರುವಿನಲ್ಲಿ ಇಟ್ಟಿದ್ದರು. ಜೊತೆಗೆ 6 ಲಕ್ಷ ರೂ ಹಣವನ್ನೂ ಇಟ್ಟಿದ್ದರು.