ಕರ್ನಾಟಕ

karnataka

ETV Bharat / bharat

ಪರೀಕ್ಷಾ ಕಿಟ್​ಗಳ ಖರೀದಿಯಲ್ಲಿ ಭಾರತ ವಿಳಂಬ ಮಾಡಿದೆ-ರಾಹುಲ್ ಗಾಂಧಿ - ಕೊರೊನಾ ಪಾಸಿಟಿವ್​

ಭಾರತ ಅತ್ಯಂತ ಕಡಿಮೆ ಪ್ರಮಾಣದ ಪರೀಕ್ಷೆಯನ್ನು ನಡೆಸುತ್ತಿದೆ. ಪ್ರತಿ ಮಿಲಿಯನ್​ ಜನಸಂಖ್ಯೆಗೆ ಕೇವಲ 149 ಮಂದಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ನಾವು ಲಾವೋಸ್​, ನೈಜರ್ ಮತ್ತು ಹೊಂಡುರಾಸ್​​ನಂತಹ ದೇಶಗಳ ಸಾಲಿನಲ್ಲಿದ್ದೇವೆ ಎಂದು ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ದೇಶವು ಪರೀಕ್ಷಾ ಕಿಟ್​ಗಳ ಖರೀದಿಯಲ್ಲಿ ವಿಳಂಬ ಮಾಡಿದೆ ಹಾಗೂ ಅತ್ಯಂತ ಕಡಿಮೆ ಕಿಟ್​ಗಳನ್ನು ಹೊಂದಿದೆ ಎಂದಿದ್ದಾರೆ.

By

Published : Apr 14, 2020, 5:48 PM IST

ನವದೆಹಲಿ : ಕೊರೊನಾ ವೈರಸ್ ಕುರಿತಂತೆ ಲಾಕ್​ಡೌನ್ ಆದೇಶವನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಈ ನಡುವೆ ಸೋಂಕಿತರ ಸಂಖ್ಯೆಯಲ್ಲೂ ಏರಿಕೆ ದಾಖಲಾಗುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವೈಫಲ್ಯದ ಕುರಿತು ಟ್ವೀಟ್​ ಮಾಡಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಪ್ರಮುಖ ವಿಷಯಯೆಂದರೆ ಸಾಮೂಹಿಕವಾಗಿ ಪರೀಕ್ಷೆಗೆ ಒಳಪಡಿಸಿಸುವುದು. ಆದರೆ, ದೇಶದಲ್ಲಿ ಇಂತಹ ವ್ಯವಸ್ಥೆ ಇಲ್ಲ ಎಂದಿದ್ದಾರೆ.

ದೇಶದಲ್ಲಿ ಸೋಂಕಿತರನ್ನು ಗುರುತಿಸಲು ಪರಿತಪಿಸುವಂತಾಗಿದೆ. ಭಾರತ ಅತ್ಯಂತ ಕಡಿಮೆ ಪ್ರಮಾಣದ ಪರೀಕ್ಷೆ ನಡೆಸುತ್ತಿದೆ. ಪ್ರತಿ ಮಿಲಿಯನ್​ ಜನಸಂಖ್ಯೆಗೆ ಕೇವಲ 149 ಮಂದಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ನಾವು ಲಾವೋಸ್​, ನೈಜರ್ ಮತ್ತು ಹೊಂಡುರಾಸ್​​ನಂತಹ ದೇಶಗಳ ಸಾಲಿನಲ್ಲಿದ್ದೇವೆ ಎಂದಿದ್ದಾರೆ.

ದೇಶವು ಪರೀಕ್ಷಾ ಕಿಟ್​ಗಳ ಖರೀದಿಯಲ್ಲಿ ವಿಳಂಬ ಮಾಡಿದೆ ಹಾಗೂ ಅತ್ಯಂತ ಕಡಿಮೆ ಕಿಟ್​ಗಳನ್ನು ಹೊಂದಿದೆ. ಅಲ್ಲದೆ ಸಾಮೂಹಿಕವಾಗಿ ಎಲ್ಲರನ್ನು ಪರೀಕ್ಷೆಗೊಳಪಡಿಸುವುದೇ ಈ ವೈರಸ್ ತಡೆಯಲು ಮೊದಲ ಹೆಜ್ಜೆಯಾಗಿದೆ. ಆದರೆ, ನಾವು ಈ ಹೋರಾಟದಲ್ಲಿ ಹಿಂದುಳಿದಿದ್ದೇವೆ ಎಂದಿದ್ದಾರೆ.

ABOUT THE AUTHOR

...view details