ಹೈದರಾಬಾದ್(ತೆಲಂಗಾಣ):ದೇಶಾದ್ಯಂತ ಕೋವಿಡ್-19 ಪ್ರಕರಣ ಹೆಚ್ಚಾಗುತ್ತಿದ್ದಂತೆ ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸುವಿಕೆಯೂ ಹೆಚ್ಚುತ್ತಿದೆ. ಹಾಗೆಯೇ ವ್ಯಾಪಾರ ಮತ್ತು ಸಾರಿಗೆ ಚಟುವಟಿಕೆಗಳು ಕೂಡ ಭರದಿಂದ ಸಾಗಿವೆ.
ಈ ಸನ್ನಿವೇಶದಲ್ಲಿ ಪ್ರತಿಯೊಬ್ಬರು ಸುರಕ್ಷಿತವಾಗಿರಲು, ಸದೃಢವಾಗಿರಲು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಈ ಮುನ್ನೆಚ್ಚರಿಕೆಗಳಲ್ಲಿ ಮುಖ್ಯವಾದುದು ಎಂದರೆ ಮುಖಗವಸುಗಳನ್ನು ಧರಿಸುವುದು. ಹೀಗಾಗಿ ಜನರು ಯಾವ ರೀತಿಯ ಮುಖಗವಸುಗಳನ್ನು ಬಳಸಿದರೆ ಸೂಕ್ತ. ಆರೋಗ್ಯ ವೃತ್ತಿಪರರು ಬಳಸಿಕೊಳ್ಳುವ ಮಾಸ್ಕ್ಗಳಿಗಿಂತ ಅವು ಹೇಗೆ ಭಿನ್ನವಾಗಿವೆ ತಿಳಿಯುವುದು ಅವಶ್ಯಕ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಮಾರ್ಗಸೂಚಿಗಳ ಪ್ರಕಾರ ಈ ಮುಖಗವಸುಗಳನ್ನು ಬಳಸುವಾಗ ಗಮನಿಸಬೇಕಾದ ಕೆಲವು ಮುನ್ನೆಚ್ಚರಿಕೆಗಳನ್ನು ಈ ಕೆಳಗೆ ನೀಡಲಾಗಿದೆ :
ಮುಖಗವಸುಗಳ ವಿಧಗಳು :
* ವೈದ್ಯಕೀಯ ಮುಖವಾಡಗಳು : ಕೋವಿಡ್‌ನಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಸೇವೆ ಸಲ್ಲಿರುತ್ತಿರುವವರು N95 ವೈದ್ಯಕೀಯ ಮುಖವಾಡಗಳನ್ನು ಬಳಸಬೇಕು. ಹೃದಯ-ನಾಳೀಯ ಕಾಯಿಲೆಗಳು, ದೀರ್ಘಕಾಲದ ಕಾಯಿಲೆಗಳು ಮತ್ತು ದೀರ್ಘಕಾಲೀನ ರೋಗಿಗಳ ಆರೈಕೆ ಕೇಂದ್ರಗಳಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಕೆಲಸ ಮಾಡುವ ಆರೋಗ್ಯ ವೃತ್ತಿಪರರು ಸಹ N95 ವೈದ್ಯಕೀಯ ಮುಖವಾಡಗಳನ್ನು ಬಳಸಬೇಕು.
ಕೊರೊನಾ ವೈರಸ್ ಸೋಂಕಿತರು ಕೂಡ ವೈದ್ಯಕೀಯ ಮುಖವಾಡಗಳನ್ನು ಬಳಸಬೇಕು :
ಸಾಮಾನ್ಯ ಜನರಿಗೆ ಸರಳ ಮುಖವಾಡಗಳು :
* ಕೊರೊನಾ ವೈರಸ್ ಹಾವಳಿ ನಡುವೆಯೂ ಹೊರಗೆ ಹೋಗಬಯಸುವವರು, ಸಾರ್ವಜನಿಕ ಸಾರಿಗೆಯಾದ ಬಸ್ಸುಗಳು, ರೈಲುಗಳು, ಆಟೋ ಇತ್ಯಾದಿಗಳಲ್ಲಿ ಪ್ರಯಾಣಿಸುವಂತಹ ಸಾಮಾನ್ಯ ಜನರು ಈ ಸರಳ ಮುಖವಾಡಗಳನ್ನು ಬಳಸಬೇಕು. ಅದರಲ್ಲೂ ಕಿಕ್ಕಿರಿದ ಸ್ಥಳಗಳು, ಮಾಲ್‌ಗಳು, ಅಂಗಡಿಗಳಿಗೆ ಹೋಗುವವರು ಮಾಸ್ಕ್ ಬಳಸುವುದು ಅತ್ಯಗತ್ಯ.
* ಈ ಸರಳ ಮುಖಗವಸುಗಳು ದೇಶೀಯವಾಗಿ ಬಟ್ಟೆ ಇತ್ಯಾದಿಗಳನ್ನು ಬಳಸಿ ಮನೆಯಲ್ಲಿ ತಯಾರಿಸಿದವಾಗಿರುತ್ತವೆ. ಹೊರಗೆ ಖರೀದಿಸಿದ ಮುಖಗವಸುಗಳನ್ನು ಎಚ್ಚರಿಕೆಯಿಂದ ಮತ್ತು ಕಾಳಜಿಯ ಮುನ್ನೆಚ್ಚರಿಕೆಗಳೊಂದಿಗೆ ಬಳಸಬೇಕು.
* 3-ಲೇಯರ್ಡ್ ಮುಖಗವಸಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.