ಕಣ್ಣೂರು(ಕೇರಳ): ಜಿಲ್ಲೆಯ ತ್ರಿಚಂಬರಂ ತಾಲಿಪರಂಬಾ ಮೂಲದ ಎಂಟು ವರ್ಷದ ಬಾಲಕ ಸಿದ್ಧಾರ್ಥ್ ಪಿ ವರಿಯಾರ್ ಸ್ವತಃ ಮಾಸ್ಕ್ ತಯಾರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
ಮಾಸ್ಕ್ ತಯಾರಿಸಿ ಅವಶ್ಯಕತೆ ಇದ್ದವರಿಗೆ ವಿತರಿಸುತ್ತಿದ್ದಾನೆ ಈ ಬಾಲಕ - Kannur, Kerala
ಕೇರಳದ ಎಂಟು ವರ್ಷದ ಬಾಲಕನೊಬ್ಬ ಮುಖಗವಸು ತಯಾರಿಸಿ ಕೋವಿಡ್ ಸಮಯದಲ್ಲಿ ಅವಶ್ಯಕತೆ ಇರುವವರಿಗೆ ಮಾಸ್ಕ್ ವಿತರಿಸಿ ಮಾದರಿಯಾಗಿದ್ದಾನೆ.
ಲಾಕ್‌ಡೌನ್ ಸಮಯದಲ್ಲಿ ತಾನು ಕಲಿತ ಹೊಸ ಕೌಶಲವನ್ನ ಸಂಪೂರ್ಣವಾಗಿ ಬಳಸಿಕೊಂಡು ಮಾಸ್ಕ್ ತಯಾರಿಸಿ ಇತರರಿಗೆ ಸಹಾಯ ಮಾಡಲು ಮುಂದಾಗಿದ್ದಾನೆ. ಸಿದ್ಧಾರ್ಥ್ ತನ್ನ ಅಜ್ಜ ಅಚ್ಯುತ್ ವಾರಿಯರ್ ಹಾದಿಯಲ್ಲಿ ಮುಂದುವರೆಯುತ್ತಿದ್ದು, ಇವರು ಶ್ರೀಕೃಷ್ಣ ದೇವಸ್ಥಾನ ಉತ್ಸವಕ್ಕಾಗಿ ಕೊಡಿಕ್ಕೂರ (ದೇವಾಲಯದ ಹಬ್ಬದ ಧ್ವಜ) ತಯಾರಿಸಲು ಹೆಸರುವಾಸಿಯಾಗಿದ್ದಾರೆ. ತ್ರಿಚಂಬರಂನ ಪೂಕ್ಕೋಥ್ ನಾಡಾದ ಮುಂಭಾಗದಲ್ಲಿರುವ ಅಚ್ಯುತ್ ವಾರಿಯರ್ ಟೈಲರಿಂಗ್ ಅಂಗಡಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ.
ಅಜ್ಜನ ಕೆಲಸವನ್ನು ಗಮನಿಸಿದ ಬಾಲಕ ಸಿದ್ಧಾರ್ಥ್ ತಾನೂ ಸಹ ಬಟ್ಟೆ ಹೊಲೆಯುವುದನ್ನ ಕಲಿತಿದ್ದ. ಸಿದ್ಧಾರ್ಥ್ ಎರಡು ಲೇಯರ್ಡ್ ಮತ್ತು ಮೂರು ಲೇಯರ್ಡ್ ಮಾಸ್ಕ್ಗಳನ್ನ ದಿನಕ್ಕೆ ಐದರಂತೆ ತಯಾರಿಸಿದ್ದಾನೆ. ಸಿದ್ಧಾರ್ಥ್ ತಾತಾ ಸಹ ಮೊಮ್ಮಗನ ಕಾರ್ಯಕ್ಕೆ ಸಹಾಯ ಮಾಡುತ್ತಿದ್ದಾರೆ.