ಕರ್ನಾಟಕ

karnataka

ETV Bharat / bharat

ಸ್ವಗ್ರಾಮಕ್ಕೆ ತಲುಪಲಿರುವ ಹುತಾತ್ಮ ಸೈನಿಕನ ಪಾರ್ಥಿವ ಶರೀರ

ಭಾರತ - ಚೀನಾ ಗಡಿ ಘರ್ಷಣೆಯಲ್ಲಿ ಹುತಾತ್ಮರಾದ ಸೈನಿಕ ನಾಯಕ್ ದೀಪಕ್ ಸಿಂಗ್ ಅವರ ಪಾರ್ಥಿವ ಶರೀರ ಇಂದು ಅವರ ಮನೆಗೆ ಬರಲಿದೆ. ಅವರು 2013ರಲ್ಲಿ ಸೈನ್ಯಕ್ಕೆ ಸೇರಿದ್ದು, ಬಿಹಾರ ರೆಜಿಮೆಂಟ್​ನಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನೇಮಕಗೊಂಡಿದ್ದರು.

deepak singh
deepak singh

By

Published : Jun 19, 2020, 9:32 AM IST

ರೇವಾ (ಮಧ್ಯ ಪ್ರದೇಶ): ಹುತಾತ್ಮ ಸೈನಿಕ ನಾಯಕ್ ದೀಪಕ್ ಸಿಂಗ್ ಅವರ ಮೃತದೇಹ ಇಂದು ಮಧ್ಯಪ್ರದೇಶದ ರೇವಾ ಜಿಲ್ಲೆಯ ಅವರ ಸ್ವಗ್ರಾಮ ತಲುಪಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರ್ವ ಲಡಾಕ್‌ನಲ್ಲಿ ಸೋಮವಾರ ರಾತ್ರಿ ಚೀನಾದ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಮೃತಪಟ್ಟ 20 ಭಾರತೀಯ ಸೇನಾ ಸಿಬ್ಬಂದಿಗಳಲ್ಲಿ ದೀಪಕ್ ಸಿಂಗ್ ಕೂಡ ಸೇರಿದ್ದಾರೆ.

"ಹುತಾತ್ಮರಾದ ಸೈನಿಕನ ಮೃತದೇಹ ನಿನ್ನೆ ಸಂಜೆ ಲೇಹ್‌ನಿಂದ ಪ್ರಯಾಗರಾಜ್ ತಲುಪಿದೆ. ಶುಕ್ರವಾರ ಬೆಳಗ್ಗೆ ಅವರ ಪಾರ್ಥಿವ ಶರೀರವನ್ನ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನಗಳಿಗಾಗಿ ಅವರ ಹಳ್ಳಿಯಾದ ಫರಾಂಡಾಗೆ ತರಲಾಗುವುದು" ಎಂದು ಅಧಿಕಾರಿ ತಿಳಿಸಿದ್ದಾರೆ.

ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ದೀಪಕ್ ಸಿಂಗ್ ಅವರ ಕುಟುಂಬಕ್ಕೆ ಒಂದು ಕೋಟಿ ರೂ.ಗಳ ಗೌರವ ಧನ ಹಾಗೂ ಮನೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ABOUT THE AUTHOR

...view details