ಕರ್ನಾಟಕ

karnataka

ETV Bharat / bharat

ಸೇನೆಗೆ ಸೇರಲಿರುವ ದಿ. ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್ ಚೌಹಾನ್ ಪತ್ನಿ - 'ವೀರ್ ನಾರಿ' ನಿಬಂಧನೆ

ಮೂಲತಃ ಆಗ್ರಾದ ದಯಾಲ್‌ಬಾಗ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಕರುಣಾ ಅವರು ಮಾರ್ಚ್ 10, 2019 ರಂದು ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್ ಚೌಹಾಣ್ ಅವರನ್ನು ವಿವಾಹವಾದರು. ಪತಿಯ ಮರಣದ ಬಳಿಕ ತಮ್ಮ ಕುಟುಂಬ ಮತ್ತು ಸ್ನೇಹಿತರ ಬೆಂಬಲದೊಂದಿಗೆ ಅವರೀಗ ಭಾರತೀಯ ಸೇನೆಗೆ ಸೇರಲು ಸಜ್ಜಾಗಿದ್ದಾರೆ.

ಸೇನೆಗೆ ಸೇರಲಿರುವ ದಿ. ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್ ಚೌಹಾನ್ ಪತ್ನಿ
ಸೇನೆಗೆ ಸೇರಲಿರುವ ದಿ. ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್ ಚೌಹಾನ್ ಪತ್ನಿ

By

Published : Dec 22, 2020, 2:21 PM IST

ರತ್ಲಂ (ಮಧ್ಯಪ್ರದೇಶ): ನೌಕಾಪಡೆಯ ಅಧಿಕಾರಿ ದಿವಂಗತ ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್ ಚೌಹಾನ್ ಅವರ ಪತ್ನಿ ಕರುಣಾ ಚೌಹಾನ್ ಅವರು ದೇಶ ಸೇವೆ ಮಾಡುವ ಸಲುವಾಗಿ ಸೇನೆ ಸೇರಲಿದ್ದಾರೆ.

ಸೇನೆಗೆ ಸೇರಲಿರುವ ದಿ. ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್ ಚೌಹಾನ್ ಪತ್ನಿ

ಮೂಲತಃ ಆಗ್ರಾದ ದಯಾಲ್‌ಬಾಗ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಕರುಣಾ ಮಾರ್ಚ್ 10, 2019 ರಂದು ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್ ಚೌಹಾಣ್ ಅವರನ್ನು ವಿವಾಹವಾದರು. ಅವರ ಮದುವೆಯಾದ ಕೂಡಲೇ ಧರ್ಮೇಂದ್ರ ಅವರು ಕರ್ತವ್ಯಕ್ಕೆ ಹೋಗಬೇಕಾಯಿತು.

ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಕರ್ನಾಟಕದ ಕಾರವಾರ ಬಂದರನ್ನು ತಲುಪುವ ಮುನ್ನವೇ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಧರ್ಮೇಂದ್ರ ಅವರು ಮೃತಪಟ್ಟರು.

ದುರಾದೃಷ್ಟವಶಾತ್ ಮದುವೆಯಾದ 40 ದಿನಗಳ ಒಳಗೆ ಕರುಣಾ ಅವರು ಗಂಡನನ್ನು ಕಳೆದುಕೊಂಡರು. ಇದೇ ನೋವಿನಲ್ಲಿದ್ದ ಅವರಿಗೆ ಅತ್ತೆ ಟೀನಾ ಕುನ್ವರ್ ಚೌಹಾನ್ ಮತ್ತು ತಾಯಿ ಕೃಷ್ಣ ಸಿಂಗ್ ಅವರು ಧೈರ್ಯ ತುಂಬಿ, ಬದುಕಲು ಹುರುಪು ನೀಡಿದ್ದಾರೆ ಎಂದು ಕರುಣಾ ಹೇಳುತ್ತಾರೆ.

ಓದಿ:ಸಿಎಂ ನಿತೀಶ್ ಕುಮಾರ್​ ನೋಡಲು ಮುಗಿಬಿದ್ದ ಗ್ರಾಮಸ್ಥರು: ಐದು ಎಕರೆ ಬೆಳೆ ನಾಶ

ABOUT THE AUTHOR

...view details