ಕರ್ನಾಟಕ

karnataka

By

Published : Jun 19, 2020, 8:02 PM IST

ETV Bharat / bharat

ಹುತಾತ್ಮ ಯೋಧ ಗಣೇಶ್​ ಕುಂಜಮ್​​​ ಸಹೋದರಿಗೆ ಕೊರೊನಾ... ಅಂತ್ಯಕ್ರಿಯೆಯಲ್ಲಿ ಭಾಗಿ!

ಜವಾನ್​ ಗಣೇಶ್​ ಕುಂಜಮ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಅವರ ಸಹೋದರಿಗೆ ಕೊರೊನಾ ಪಾಸಿಟಿವ್​ ಇರುವುದು ಖಚಿತಗೊಂಡಿದ್ದು, ಈಗಾಗಲೇ ಗ್ರಾಮವನ್ನು ಸೀಲ್​ಡೌನ್​ ಮಾಡಲಾಗಿದೆ.

martyr ganesh kunjam sister rapid kit test positive
martyr ganesh kunjam sister rapid kit test positive

ಕಂಕೆರ್​(ಛತ್ತೀಸಘಡ್): ಚೀನಾ-ಭಾರತ ಸಂಘರ್ಷದ ವೇಳೆ ಹುತಾತ್ಮರಾಗಿರುವ ಜವಾನ್​ ಗಣೇಶ್​ ಕುಂಜಮ್​ ಅವರ ಅಂತ್ಯಕ್ರಿಯೆ ಇಂದು ನಡೆಸಲಾಗಿದ್ದು, ಇದರಲ್ಲಿ ಭಾಗಿಯಾಗಿದ್ದ ವೀರ ಯೋಧನ ಸಹೋದರಿಗೆ ಕೊರೊನಾ ಪಾಸಿಟಿವ್​ ಇರುವುದು ಕನ್ಫರ್ಮ್​ ಆಗಿದೆ.

ಹುತಾತ್ಮ ಯೋಧ ಗಣೇಶ್​ ಕುಂಜಮ್​​​ ಸಹೋದರಿಗೆ ಕೊರೊನಾ

ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ದ ಇವರು ವೀರ ಯೋಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಕ್ಕಾಗಿ ಇಂದು ಬೆಳಗ್ಗೆ ಆಗಮಿಸಿದ್ದರು. ಈ ವೇಳೆ ಅವರ ಗಂಟಲು ದ್ರವ ಕೊರೊನಾ ಪರೀಕ್ಷೆಗಾಗಿ ಪಡೆದುಕೊಳ್ಳಲಾಗಿತ್ತು. ಸದ್ಯ ವರದಿ ಹೊರಬಿದ್ದಿದ್ದು, ಅದು ಪಾಸಿಟಿವ್​ ಬಂದಿದೆ ಎಂದು ಹೇಳಲಾಗಿದೆ. ತಕ್ಷಣವೇ ಅವರನ್ನು ಹೋಂ ಕ್ವಾರಂಟೈನ್​ ಮಾಡಲಾಗಿದೆ

ಜವಾನ್​​ ಗಣೇಶ್​ ಕುಂಜಮ್​ ಅವರ ಅಂತ್ಯಕ್ರಿಯೆಯಲ್ಲಿ ಅವರು ಭಾಗಿಯಾಗಿದ್ದು, ಈ ವೇಳೆ ಅನೇಕರು ಸ್ಥಳದಲ್ಲಿ ಉಪಸ್ಥಿತರಿದ್ದರು. ಇದರಲ್ಲಿ ಹಿರಿಯ ಪೊಲೀಸ್​ ಅಧಿಕಾರಿಗಳು, ಸೇನಾಧಿಕಾರಿಗಳು ಸೇರಿದಂತೆ ರಾಜಕೀಯ ವ್ಯಕ್ತಿಗಳು ಭಾಗಿಯಾಗಿದ್ದ ಕಾರಣ ಆತಂಕ ಉದ್ಭವವಾಗಿದೆ. ಇನ್ನು ಗ್ರಾಮವನ್ನು ಸಂಪೂರ್ಣವಾಗಿ ಸೀಲ್​ಡೌನ್​ ಮಾಡಲಾಗಿದೆ.

ABOUT THE AUTHOR

...view details