ಅಗರ್ತಲಾ (ತ್ರಿಪುರಾ):15ನೇ ವಯಸ್ಸಿನಲ್ಲೇ ಮದುವೆ ಮಾಡಿಕೊಂಡಿದ್ದ ಮಹಿಳೆ ತಾನು ಎದುರಿಸಿದ್ದ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇ.92.6ರಷ್ಟು ಅಂಕ ಪಡೆದುಕೊಂಡಿದ್ದಾರೆ.
ಸದ್ಯ 19 ವರ್ಷದವಳಾಗಿರುವ ಸಂಗಮಿತ್ರಾ ದೇಬ್ಗೆ ಎರಡೂವರೆ ವರ್ಷದ ಮಗನಿದ್ದಾನೆ. ಆದರೂ ಓದುವ ಛಲ ಬಿಡದ ಈಕೆ 12ನೇ ತರಗತಿ ಕಲಾ ವಿಭಾಗದ ಬೋರ್ಡ್ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ತ್ರಿಪುರಾ 12ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಅದರಲ್ಲಿ ಟಾಪ್ 10 ಪಟ್ಟಿಯಲ್ಲಿ ಸಂಗಮಿತ್ರಾ ರಾಜ್ಯಕ್ಕೆ 7ನೇ ಸ್ಥಾನ ದೊರೆತಿದೆ.