ಕರ್ನಾಟಕ

karnataka

ETV Bharat / bharat

ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ: ಅತ್ತೆಯನ್ನು ತಡೆಯದೆ ವಿಡಿಯೋ ಮಾಡಿದ ಅಳಿಯಂದಿರು - ರಾಜಸ್ಥಾನದಲ್ಲಿ ಮಹಿಳೆ ಆತ್ಮಹತ್ಯೆ

ಮಹಿಳೆಯೊಬ್ಬರು ಅಳಿಯಂದಿರ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರೂ ಕೂಡ ಆಕೆಯನ್ನು ತಡೆಯಲು ಮುಂದಾಗಿಲ್ಲ.

Married woman set herself on fire by spraying kerosene
ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ

By

Published : Nov 26, 2020, 5:10 PM IST

ಝುಂಝುನೂ(ರಾಜಸ್ಥಾನ): ಝುಂಝುುನೂ ಜಿಲ್ಲೆಯ ಉದಯಪುರರ್ವತಿ ಪ್ರದೇಶದ ಭೋರ್ಕಿ ಗ್ರಾಮದಲ್ಲಿ ವಿವಾಹಿತ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ

ಮಹಿಳೆಯ ಅಳಿಯಂದಿರು ಈ ಭೀಕರ ಘಟನೆಯನ್ನು ವಿಡಿಯೋ ಮಾಡಿದ್ದು, ಯಾರೂ ಆಕೆಯನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಮಹಿಳೆ ಅಳಿಯಂದಿರ ಮುಂದೆಯೇ ಬೆಂಕಿ ಹಚ್ಚಿಕೊಂಡ ಮಹಿಳೆಯ ಸಹಾಯಕ್ಕೆ ಯಾರೂ ಕೂಡ ಧಾವಿಸಿಲ್ಲ.

ಈ ಘಟನೆಯ ವಿಡಿಯೋ ಹೊರಬಿದ್ದ ನಂತರ, ಝುಂಝುನು ಜಿಲ್ಲೆಯ ಗುಡ್ಡಾ ಪೊಲೀಸ್ ಠಾಣೆಯಲ್ಲಿ ಅಳಿಯಂದಿರ ವಿರುದ್ಧ ಪ್ರಕರಣ ದಾಖಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾಳೆ. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ABOUT THE AUTHOR

...view details