ಹೈದರಾಬಾದ್:ಒಬ್ಬಾಕೆ ಜೊತೆ ಮದುವೆಯಾಗಿ ಮತ್ತೊಬ್ಬಾಕೆ ಜೊತೆ ಸಹಜೀವನ ನಡೆಸುತ್ತಿದ್ದ ವ್ಯಕ್ತಿ ಕೊನೆಗೂ ಬಲೆಗೆ ಬಿದ್ದಿದ್ದಾನೆ. ಈ ಘಟನೆ ಹೈದರಾಬಾದ್ನ ಜೂಬ್ಲಿಹಿಲ್ಸ್ನಲ್ಲಿ ನಡೆದಿದೆ.
ಇಲ್ಲಿನ ಪೆದ್ದಪಲ್ಲಿಯ ನಿವಾಸಿ ಆಕುದಾರಿ ಕಾರ್ತಿಕ್ (29) ಬೆಂಗಳೂರಿನಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾನೆ. ಯೂಸಫ್ಗೂಡ್ ಬಸ್ತಿಯಲ್ಲಿ ಇರುವಾಗ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಂದಿಗೆ ಪರಿಚಯವಾಗಿದೆ. ಪ್ರೀತಿಸಿ, ಸಹಜೀವನ ನಡೆಸಿದ ಬಳಿಕ ಇಬ್ಬರು ಮದುವೆಯಾದರು. ಆದ್ರೆ ಕಾರ್ತಿಕ್ಗೆ ಇದಕ್ಕೂ ಮುನ್ನ ಮತ್ತೊಬ್ಬಳ ಜೊತೆ ಸಹಜೀವನ ನಡೆಸುತ್ತಿದ್ದನು.
ಹೌದು, ಮದುವೆಗೂ ಮುನ್ನ ಕಾರ್ತಿಕ್ ಮತ್ತೊಬ್ಬಳ ಜತೆ ಸಹಜೀವನ ನಡೆಸುತ್ತಿದ್ದ. ಆಕೆಗೆ ಮದುವೆಯಾಗ್ತಿನಿ ಅಂತಾ ನಂಬಿಸಿದ್ದ. ಕಾರ್ತಿಕ್ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ರೂ ಸಹ ಮತ್ತೊಬ್ಬಾಕೆ ಜೊತೆ ಎಂಟು ವರ್ಷಗಳ ಸಹಜೀವನ ನಡೆಸುತ್ತಲ್ಲೇ ಬಂದನು. ಈ ವಿಷಯ ಯುವತಿಯರಿಬ್ಬರಿಗೂ ತಿಳಿದಿದೆ. ಇಬ್ಬರೂ ಆತನ ವಿರುದ್ಧ ತಿರುಗಿ ಬಿದ್ದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮದುವೆಯಾಗಿರುವ ಯುವತಿ ಗಂಡ ಕಾರ್ತಿಕ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಸಹಜೀವನ ನಡೆಸುತ್ತಿದ್ದ ಯುವತಿ ಕಾರ್ತಿಕ್ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಇನ್ನು ಪೊಲೀಸರು ಕಾರ್ತಿಕ್ ಮತ್ತು ಆತನ ಕುಟುಂಬಸ್ಥರನ್ನು ಭರವಸೆ (ಕೌನ್ಸೆಲಿಂಗ್) ಕೇಂದ್ರಕ್ಕೆ ಕರೆದು ಬುದ್ದಿ ಹೇಳಿದ್ದರು. ಎರಡು ದಿನಗಳ ಕಾಲಾವಕಾಶ ಕೋರಿ ಕಾರ್ತಿಕ್ ಪರಾರಿಯಾಗಿದ್ದಾನೆ.
ಈ ಘಟನೆ ಕುರಿತು ಕಾರ್ತಿಕ್ ಮೇಲೆ ಪೊಲೀಸರು ವಿವಿಧ ಪ್ರಕರಣಗಳನ್ನ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.