ಕೋಯಿಕೋಡ್(ಕೇರಳ):ಇಲ್ಲಿನ ಬೇಪೋರ್ ಬೀಚ್ನಲ್ಲಿ ಸಾಗರದ ಮೇಲೊಂದು ಸ್ಮಶಾನ ನಿರ್ಮಾಣ ಮಾಡಲಾಗಿದೆ. ಆದ್ರೆ ಇದು ಸಾಂಕೇತಿಕ ಸ್ಮಶಾನ ಅಷ್ಟೇ.
ಕೇರಳದಲ್ಲಿ ಸಾಗರದ ಮೇಲೊಂದು ಸ್ಮಶಾನ: ಆದ್ರೆ ಇಲ್ಲಿ ಹೆಣ ಹೂಳಲ್ಲ! - Marine Cemetery news
ಕೇರಳದ ಕೋಯಿಕೋಡ್ ಜಿಲ್ಲೆಯ ಬೇಪೋರ್ ಬೀಚ್ನಲ್ಲಿ ಸಾಗರದ ಮೇಲೊಂದು ಸ್ಮಶಾನ ನಿರ್ಮಾಣ ಮಾಡಲಾಗಿದೆ. ಆದ್ರೆ ಇಲ್ಲಿ ಯಾವುದೇ ಹೆಣಗಳನ್ನು ಹೂಳಲ್ಲ. ಇದ್ರ ಹಿಂದಿದೆ ಒಂದು ಸದುದ್ದೇಶ!
ಸಾಗರದೊಳಗೆ ಸ್ಮಶಾನ ನಿರ್ಮಾಣ
ಕೋಯಿಕೋಡ್ ಬಂದರು ಅಧಿಕಾರಿ ಕ್ಯಾಪ್ಟನ್ ಅಶ್ವಿನಿ ಪ್ರತಾಪ್ ಮಾಹಿತಿ ನೀಡಿ, ಇದು ಸಾಂಕೇತಿಕ ನಿರ್ಮಾಣವಾಗಿದ್ದು, ಪ್ಲಾಸ್ಟಿಕನ್ನು ನೀರಿಗೆ ಎಸೆಯುವುದರಿಂದ ವಿವಿಧ ಜಾತಿಯ ಮೀನುಗಳು ನಿರ್ನಾಮವಾಗುತ್ತಿವೆ. ಹೀಗಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
ಜಲಮಾಲಿನ್ಯದಿಂದ ಜಲಚರಗಳನ್ನು ರಕ್ಷಿಸುವ ಉದ್ದೇಶದಿಂದ ಈ ವಿಶೇಷ ಸ್ಮಶಾನ ನಿರ್ಮಾಣ ಮಾಡಲಾಗಿದೆ.
Last Updated : Dec 12, 2019, 3:07 PM IST