ಕರ್ನಾಟಕ

karnataka

ETV Bharat / bharat

ಮಾವೋವಾದಿಗಳಿಂದ ಬಿಜೆಪಿ ನಾಯಕನ ಹತ್ಯೆ..! - ಬಿಜೆಪಿ ನಾಯಕ ದಿನೇಶ್​ ಕೋಡಾ ಹತ್ಯೆ

ಮಾವೋವಾದಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತಿದ್ದ ಎಂಬ ಆರೋಪದಡಿ ಬಿಜೆಪಿ ನಾಯಕನನ್ನು ಬಿಹಾರದ ಮುಂಗೆರ್​ ಜಿಲ್ಲೆಯಲ್ಲಿ ಕೊಲೆ ಮಾಡಲಾಗಿದೆ.

ಮಾವೋವಾದಿಗಳಿಂದ ಬಿಜೆಪಿ ನಾಯಕನ ಹತ್ಯೆ..!

By

Published : Sep 14, 2019, 9:03 AM IST

ಬಿಹಾರ್​/ಮುಂಗೆರ್​:ಬಿಜೆಪಿ ನಾಯಕ ದಿನೇಶ್​ ಕೋಡಾ ಅವರನ್ನು ಮಾವೋವಾದಿಗಳು ಹತ್ಯೆ ಮಾಡಿರುವ ಘಟನೆ ಬಿಹಾರದ ಮುಂಗೆರ್​ ಜಿಲ್ಲೆಯ ಲಡಯೈತಂಡ್​ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ದಿನೇಶ್​ ಕೋಡಾ(42) ಬಿಜೆಪಿಯ ಎಸ್‌ಸಿ / ಎಸ್‌ಟಿ ಬಣದ ಜಿಲ್ಲಾ ಘಟಕದ ಮುಖ್ಯಸ್ಥರಾಗಿದ್ದು, ಗುಪ್ತ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ ಹಿನ್ನೆಲೆ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ದಿನೇಶ್​ ಸತ್ಘರ್ವಾ ಪ್ರದೇಶದ ನಿವಾಸಿಯಾಗಿದ್ದು, ಅರಣ್ಯ ಪ್ರದೇಶದಲ್ಲಿ ಕೋಡಾ ಮೃತದೇಹ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಷೇಧಿತ ಮಾವೋವಾದಿ ಗುಂಪಿನ ಹೆಸರಿನಲ್ಲಿ ಪತ್ರವೊಂದು ಮೃತದೇಹದ ಪಕ್ಕದಲ್ಲಿ ದೊರೆತಿದ್ದು, ಆ ಪತ್ರದಲ್ಲಿ ಹತ್ಯೆ ಮಾಡಲಾಗಿರುವ ದಿನೇಶ್​ ಕೋಡಾ ಮಾವೋವಾದಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂದು ಬರೆಯಲಾಗಿದೆ.

ಮಾವೋವಾದಿಗಳಿಂದ ಬಿಜೆಪಿ ನಾಯಕನ ಹತ್ಯೆ..!

ಹತ್ಯೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಕೋಡಾ ಹಿಂದೆ ಮಾವೋವಾದಿಯಾಗಿದ್ದು, ಈಗ ಅವೆಲ್ಲವನ್ನು ಬಿಟ್ಟಿ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details