ಜಾರ್ಖಂಡ್ :ಇಲ್ಲಿನ ಲೋಹರ್‌ದಗ ಪಟ್ಟಣದ ಪಖರ್ ಬಾಕ್ಸೈಟ್ ಗಣಿಗಳಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಸುಮಾರು 11 ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಕಳೆದ ರಾತ್ರಿ ಈ ಘಟನೆ ನಡೆದಿದೆ.
ಜಾರ್ಖಂಡ್ನಲ್ಲಿ ನಕ್ಸಲ್ ಅಟ್ಟಹಾಸ.. 11 ವಾಹನಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು.. - ಬಾಕ್ಸೈಟ್ ಗಣಿ
ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಮಾವೋವಾದಿ ನಾಯಕ ರವೀಂದ್ರ ಗಂಜು ದಾಳಿಯ ಹಿಂದಿನ ರುವಾರಿ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
![ಜಾರ್ಖಂಡ್ನಲ್ಲಿ ನಕ್ಸಲ್ ಅಟ್ಟಹಾಸ.. 11 ವಾಹನಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು.. ಜಾರ್ಖಂಡ್ನಲ್ಲಿ ನಕ್ಸಲ್ ಅಟ್ಟಹಾಸ](https://etvbharatimages.akamaized.net/etvbharat/prod-images/768-512-7458021-thumbnail-3x2-mng.jpg)
ಜಾರ್ಖಂಡ್ನಲ್ಲಿ ನಕ್ಸಲ್ ಅಟ್ಟಹಾಸ
ಪಖರ್ ಗಣಿಗಳಲ್ಲಿನ ಸಿಪಿಐ ಮಾವೋವಾದಿ ಗುಂಪಿಗೆ ಸೇರಿದ ನಕ್ಸಲರು ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಮಾವೋವಾದಿ ನಾಯಕ ರವೀಂದ್ರ ಗಂಜು ದಾಳಿಯ ಹಿಂದಿನ ರುವಾರಿ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಮಾಹಿತಿ ಪ್ರಕಾರ, ಬಾಲಾಜಿ ಕಂಪನಿಯ 6 ವಾಹನಗಳು ಹಾಗೂ ಬಿಕೆಬಿ ಕಂಪನಿಯ 5 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.