ಚೆನ್ನೈ (ತಮಿಳುನಾಡು):ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕಿ ಶ್ರೀಮತಿ ಅಲಿಯಾಸ್ ಸಂಗೀತಾಳನ್ನು ಬಂಧಿಸುವಲ್ಲಿ ತಮಿಳುನಾಡಿನ ಕೊಯಮತ್ತೂರಿನ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.
28 ವರ್ಷದ ಶೃಂಗೇರಿ ಮೂಲದ ಮಾವೋವಾದಿ ನಾಯಕಿ ಶ್ರೀಮತಿಯನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಶ್ರೀಮತಿಯನ್ನು ಈರೋಡ್‌ಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.