ಬಿಜಾಪುರ(ಛತ್ತೀಸ್ಗಢ): ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲ್ನನ್ನು ಹತ್ಯೆಗೈದಿರುವ ಘಟನೆ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಛತ್ತೀಸ್ಗಢ ಎನ್ಕೌಂಟರ್: ಓರ್ವ ನಕ್ಸಲ್ ಹತ - ನಕ್ಸಲ್ ಹತ
ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ಓರ್ವ ನಕ್ಸಲ್ನನ್ನು ಹೊಡೆದುರುಳಿಸಲಾಗಿದೆ.
ಛತ್ತೀಸ್ಗಢ ಎನ್ಕೌಂಟರ್
ಸೋಮವಾರ ರಾತ್ರಿ 9.30ರ ವೇಳೆಗೆ ಬಿಜಾಪುರದ ಗಂಗಲೂರ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ನನ್ನು ಹೊಡೆದುರುಳಿಸಿ, ಆತನ ಮೃತದೇಹವನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ.
ಗಂಗಲೂರ್ ಪ್ರದೇಶದಲ್ಲಿ ಬಿಜಾಪುರ - ದಂತೇವಾಡದ ಕೋಬ್ರಾ ಕಮಾಂಡೋ ಪಡೆ ಹಾಗೂ ಸಿಆರ್ಪಿಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.