ಕರ್ನಾಟಕ

karnataka

ETV Bharat / bharat

ಹಣ ನೀಡಲು ಒಪ್ಪದ ಟಿಆರ್​ಎಸ್​ ಕಾರ್ಯಕರ್ತನ ಇರಿದು ಕೊಂದ ಮಾವೋವಾದಿಗಳು - ಮಾವೋವಾದಿಗಳಿಂದ ಟಿಆರ್​ಎಸ್​ ಕಾರ್ಯಕರ್ತನ ಹತ್ಯೆ

ಗ್ರಾಮದಲ್ಲಿ ರಸಗೊಬ್ಬರ ಅಂಗಡಿ ನಡೆಸುತ್ತಿರುವ ಭೀಮೇಶ್ವರ ರಾವ್​ಗೆ ಹಣ ನೀಡುವಂತೆ ಮಾವೋವಾದಿಗಳು ಪೀಡಿಸುತ್ತಿದ್ದರು ಎನ್ನಲಾಗಿದೆ. ಹಣ ನೀಡಲು ಒಪ್ಪದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Maoist kill TRS Party worker in Telangana
ತೆಲಂಗಾಣದಲ್ಲಿ ಟಿಆರ್​ಎಸ್​ ಕಾರ್ಯಕರ್ತನ ಹತ್ಯೆ

By

Published : Oct 11, 2020, 4:08 PM IST

ಹೈದರಾಬಾದ್ : ಹಣ ನೀಡಲು ನಿರಾಕರಿಸಿದ್ದಕ್ಕೆ ಟಿಆರ್​ಎಸ್​ ಪಕ್ಷದ ಕಾರ್ಯಕರ್ತನನ್ನು ಮಾವೋವಾದಿಗಳು ಕೊಲೆ ಮಾಡಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ನಡೆದಿದೆ.

ಮಾದುರಿ ಭೀಮೇಶ್ವರ ರಾವ್​ ಮೃತ ಟಿಆರ್​ಎಸ್​ ಕಾರ್ಯಕರ್ತ. ಶನಿವಾರ ರಾತ್ರಿ ಮುಳುಗು ಜಿಲ್ಲೆಯ ಅಲುಬಾಕದಲ್ಲಿರುವ ಭೀಮೇಶ್ವರ ರಾವ್ ಮನೆಗೆ ಶಸ್ತ್ರಸಜ್ಜಿತರಾಗಿ ನುಗ್ಗಿದ 6 ಜನ ಮಾವೋವಾದಿಗಳ ತಂಡ, ಪತ್ನಿ ಮುಂದೆಯೇ ಇರಿದು ಕೊಲೆ ಮಾಡಿದೆ.

ಗ್ರಾಮದಲ್ಲಿ ರಸಗೊಬ್ಬರ ಅಂಗಡಿ ನಡೆಸುತ್ತಿರುವ ಭೀಮೇಶ್ವರ ರಾವ್​ಗೆ ಹಣ ನೀಡುವಂತೆ ಮಾವೋವಾದಿಗಳು ಪೀಡಿಸುತ್ತಿದ್ದರು ಎನ್ನಲಾಗಿದೆ. ಹಣ ನೀಡಲು ಒಪ್ಪದ ಕಾರಣ ಕೊಲೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚೆಗೆ ಮಾವೋವಾದಿಗಳನ್ನು ಎನ್​ಕೌಂಟರ್​ ಮಾಡಿದ್ದಕ್ಕೆ ಪ್ರತೀಕಾರ ತೀರಿಸಲು ಮತ್ತು ಗ್ರಾಮಸ್ಥರಲ್ಲಿ ಭಯ ಮೂಡಿಸಲು ಈ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.

For All Latest Updates

ABOUT THE AUTHOR

...view details