ಕರ್ನಾಟಕ

karnataka

ETV Bharat / bharat

ಕರೊನಾ ವೈರಸ್​ಗೆ ತತ್ತರಿಸಿದ ಚೀನಾ: ಭಾರತದಲ್ಲಿ ದ್ವಿಗುಣಗೊಂಡ ಮಾಸ್ಕ್​ ಉತ್ಪಾದನೆ - ಎನ್​ 95 ಮಾಸ್ಕ್​ ಸುದ್ದಿ

ಚೀನಾದಲ್ಲಿ ಕೆರೋನಾ ವೈರಸ್​ ಹಾವಳಿ ಹೆಚ್ಚಾಗುತ್ತಿದ್ದು ಮಾರಣಾಂತಿಕ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಜನ ಮಾಸ್ಕ್‌ಗಳಿಗೆ ಮಾರುಹೋಗುತ್ತಿದ್ದು, ತಮಿಳುನಾಡಿನ ಮಧುರೈ ಮೂಲದ ಎ.ಎಮ್.ಮೆಡಿವೆರ್​​​​​​​​​​ ಕಂಪನಿ ಮಾಸ್ಕ್​ ತಯಾರಿಕೆಯನ್ನು ದ್ವಿಗುಣಗೊಳಿಸಿದೆ.

Manufacturers in Madurai working extra hours to produce N95 masks
ಕರೋನಾ ವೈರಸ್ ಎನ್​ 95 ಮಾಸ್ಕ್​

By

Published : Jan 30, 2020, 10:17 AM IST

ತಮಿಳುನಾಡು : ಚೀನಾದಲ್ಲಿ ಕಾಡ್ಗಿಚ್ಚಿನಂತೆ ಕೊರೊನಾ ವೈರಸ್​ ಹಬ್ಬುತ್ತಿದ್ದು ಸುರಕ್ಷಾ ಎನ್​ 95 ಮಾಸ್ಕ್​ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಮಹಾಮಾರಿ ರೋಗಕ್ಕೆ ತತ್ತರಿಸುತ್ತಿರುವ ಚೀನಾ ನಾಗರಿಕರು ಮುಂಜಾಗೃತಾ ಕ್ರಮಕ್ಕಾಗಿ ಮಾಸ್ಕ್‌ ಮೊರೆಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಧುರೈ ಮೂಲದ ಎಮ್.ಮೆಡಿವೆರ್​ ಮಾಸ್ಕ್​ ತಯಾರಿಕಾ ಸಂಸ್ಥೆ ದಿನದಲ್ಲಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ಉತ್ಪಾದನೆಯ ಪ್ರಮಾಣವನ್ನು ದ್ವಿಗುಣಗೊಳಿಸಿದೆ.

ಭಾರತೀಯ ಮೂಲದ ರಪ್ತುದಾರರಿಂದ ಮಾಸ್ಕ್​ಗಳಿಗೆ ಬೇಡಿಕೆ ಹೆಚ್ಚಾಗಿದ್ದು ಅದಕ್ಕಾಗಿ ನಾವು ನಮ್ಮ ಉತ್ಪಾದನೆಯನ್ನು ದ್ವಿಗುಣಗೊಳಿಸಿದ್ದೇವೆ ಎಂದು ಎ.ಎಮ್. ಮೆಡಿವೆರ್​​​ ಕಂಪನಿಯ​ ಎಂ.ಡಿ. ಅಭಿಲಾಶ್​ ತಿಳಿಸಿದರು.

ABOUT THE AUTHOR

...view details