ಕರ್ನಾಟಕ

karnataka

ETV Bharat / bharat

ಕೇಂದ್ರ ಸಚಿವರ ಮಾದರಿ ನಡೆ... ಪರಿಸರ ಕಾಳಜಿಗೆ ಸೈಕಲ್​ ಏರಿ ಸಂಸತ್​​ನತ್ತ​ ಸವಾರಿ - ಮನ್ಸುಖ್​​ ಮಾಂಡವಿಯಾ

ದೆಹಲಿಯಲ್ಲಿ ಕೇಜ್ರಿವಾಲ್​ ಸರ್ಕಾರ ಸರಿ-ಬೆಸ  ನಿಯಮ​ ಪ್ರಯೋಗ ಮಾಡಿತ್ತು. ಇನ್ನು ಹಸಿರು ನ್ಯಾಯಪೀಠ ಹೆಚ್ಚು ಕಾರ್ಬನ್​ ಡೈ ಆಕ್ಸೈಡ್​ ಸೂಸುವ ವಾಹನಗಳನ್ನ ಬ್ಯಾನ್ ಮಾಡುವಂತೆ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಕೇಂದ್ರ ಸಚಿವ

By

Published : Jun 26, 2019, 12:52 PM IST

ನವದೆಹಲಿ:ಕೇಂದ್ರ ಸಚಿವ ಹಾಗೂ ಬಿಜೆಪಿ ಎಂಪಿ ಮನ್ಸುಖ್​​ ಮಾಂಡವಿಯಾ ಇಂದು ವಿಶೇಷ ವಾಹನದಲ್ಲಿ ಸಂಸತ್​ಗೆ ಬರುವ ಮೂಲಕ ಗಮನ ಸೆಳೆದರು. ದೆಹಲಿ ಹವಾಮಾನ ವೈಪರೀತ್ಯ ಹಾಗೂ ಕೈಗಾರಿಕೆಗಳಿಂದಾಗಿ ಭಾರಿ ಮಲಿನಗೊಂಡಿದೆ. ಈ ಮಧ್ಯ ಸೈಕಲ್​ ಏರಿ ಕೇಂದ್ರ ಸಚಿವರು ಪರಿಸರ ಕಾಳಜಿ ಮೆರದಿದ್ದಾರೆ.

ದೆಹಲಿ ಪರಿಸರವನ್ನ ಸ್ವಚ್ಛವಾಗಿಡಲು ಸರ್ಕಾರಗಳು ಹರಸಾಹಸ ಪಡ್ತೀವಿ. ವಾಹನ ದಟ್ಟಣೆ ಕಡಿಮೆ ಮಾಡಲು ಕೇಜ್ರಿವಾಲ್​ ಸರ್ಕಾರ ಸರಿ-ಬೆಸ ನಿಯಮ​ ಪ್ರಯೋಗ ಮಾಡಿತ್ತು. ಇನ್ನು ಹಸಿರು ನ್ಯಾಯಪೀಠ ಹೆಚ್ಚು ಕಾರ್ಬನ್​ ಡೈ ಆಕ್ಸೈಡ್​ ಸೂಸುವ ವಾಹನಗಳನ್ನ ಬ್ಯಾನ್ ಮಾಡುವಂತೆ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಇನ್ನು ಸಾರ್ವಜನಿಕರು, ಸಾರ್ವಜನಿಕ ಸಾರಿಗೆ ಬಳಕೆ ಮಾಡುವಂತೆ ಜಾಗೃತಿ ಸಹ ಮೂಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಮಾಂಡವಿಯಾ ಸೈಕಲ್​ ಸವಾರಿ ಗಮನ ಸೆಳೆದಿದೆ.

ABOUT THE AUTHOR

...view details