ಕರ್ನಾಟಕ

karnataka

ETV Bharat / bharat

ದಿಲ್ಲಿ ಫಲಿತಾಂಶದ ಬಳಿಕ ರಾಜೀನಾಮೆಗೆ ಮುಂದಾದ ತಿವಾರಿ.. ಪಕ್ಷದ ಸಂದೇಶ ಹೀಗಿದೆ! - ದೆಹಲಿ ರಾಜ್ಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ

ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಹೊಣೆ ಹೊತ್ತು ದೆಹಲಿ ರಾಜ್ಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಆದರೆ, ಸದ್ಯಕ್ಕೆ ರಾಜೀನಾಮೆ ಸಲ್ಲಿಸುವುದು ಬೇಡ ಎಂದು ಪಕ್ಷ ಸೂಚನೆ ನೀಡಿದೆ.

Manoj Tiwari offers to resign,ರಾಜೀನಾಮೆಗೆ ಮುಂದಾದ ಮನೋಜ್ ತಿವಾರಿ
ರಾಜೀನಾಮೆಗೆ ಮುಂದಾದ ಮನೋಜ್ ತಿವಾರಿ

By

Published : Feb 12, 2020, 7:57 PM IST

ನವದೆಹಲಿ:ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಸೋಲಿನ ಹೊಣೆ ಹೊತ್ಕೊಂಡು ದೆಹಲಿ ರಾಜ್ಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.

ನಿನ್ನೆಯಷ್ಟೆ ಫಲಿತಾಂಶ ಬಂದಿದೆ. 68 ಕ್ಷೇತ್ರಗಳ್ಲಿ ಸ್ಪರ್ಧಿಸಿದ್ದ ಬಿಜೆಪಿ ಪಕ್ಷ ಕೇವಲ 8 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಹೀಗಾಗಿ ಸೋಲಿನ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ಮನೋಜ್ ತಿವಾರಿ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್‌ ತಿವಾರಿ ಅವರ ರಾಜೀನಾಮೆ ಅಂಗೀಕರಿಸಲು ನಿರಾಕರಿಸೆ ಎಂದು ತಿಳಿದು ಬಂದಿದೆ.

ಫಲಿತಾಂಶದ ಬಳಿಕ ನಾಯಕತ್ವ ಬದಲಾವಣೆಯ ಮಾತು ಕೇಳಿ ಬಂದಿದ್ರೂ ಸದ್ಯದ ಪರಿಸ್ಥಿತಿಯಲ್ಲಿ ಈ ನಿರ್ಧಾರ ಸರಿಯಲ್ಲ ಎಂದು ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ತಿವಾರಿ ಅವರ ರಾಜೀನಾಮೆ ಸ್ವೀಕರಿಸಲು ನಿರಾಕರಿಸಿದ್ದಾರಂತೆ. ದೆಹಲಿ ಬಿಜೆಪಿ ಪಕ್ಷದಲ್ಲಿ ರಚನಾತ್ಮಕ ಬದಲಾವಣೆ ಮಾಡಲಾಗುವುದು ಅಂತ ತಿಳಿಸಿದ್ದಾರೆ ಎಂತಿವೆ ಮೂಲಗಳು.

ಆಂತರಿಕ ಕಲಹದಿಂದಾಗಿ ದೆಹಲಿ ಬಿಜೆಪಿ ಘಟಕ ಅನೇಕ ಸಮಸ್ಯೆಗಳನ್ನ ಎದುರಿಸಿದೆ. ವಿಜಯ್ ಗೋಯಲ್ ಹಾಗೂ ಮನೋಜ್ ತಿವಾರಿ ಪ್ರತ್ಯೇಕ ಬಣಗಳಿವೆ. ಹರ್ಷವರ್ಧನ್ ಕೂಡ ಮತ್ತೊಂದು ಗುಂಪು ಹೊಂದಿದ್ದಾರೆ ಎನ್ನಲಾಗ್ತಿದೆ.

ABOUT THE AUTHOR

...view details