ಪಣಜಿ:ದಿವಂಗತ ಮನೋಹರ್ ಪರಿಕ್ಕರ್ ಇತ್ತೀಚೆಗೆ ಭಾರತದ ವಾಯುಸೇನೆ ನಡೆಸಿದ ವಾಯುದಾಳಿಯ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉರಿ ದಾಳಿಯ ಬಳಿಕ ಪ್ರಧಾನಿ ಮೋದಿ ನನ್ನನ್ನೂ ಸೇರಿ ಮೂವರಿಗೆ ಕರೆ ಮಾಡಿದ್ದರು. ಈ ವೇಳೆ ಪರಿಕ್ಕರ್ ಮುಖದಲ್ಲಿ ಆಕ್ರೋಶ ಎದ್ದು ಕಾಣಿಸುತ್ತಿತ್ತು. ನಂತರ ನಡೆದ ಸರ್ಜಿಕಲ್ ಸ್ಟ್ರೈಕ್ನ ರೂಪುರೇಷೆ ಹಾಗೂ ಸರ್ಜಿಕಲ್ ಸ್ಟ್ರೈಕ್ ನಡೆದ ಆ ರಾತ್ರಿಯಿಡೀ ಎಲ್ಲವನ್ನೂ ಗಮನಿಸುತ್ತಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.