ಕರ್ನಾಟಕ

karnataka

ETV Bharat / bharat

ಬಿಜೆಪಿ ದಬ್ಬಾಳಿಕೆಗೆ ಹೆದರಲ್ಲ.. ಡಿಕೆಶಿ ಪರ ಮನೀಶ್ ತಿವಾರಿ ಬ್ಯಾಟಿಂಗ್ - ಇಡಿ ಅಧಿಕಾಕಿಗಳಿಂದ ಡಿ.ಕೆ. ಶಿವಕುಮಾರ್ ಬಂಧನ

ಕೇಂದ್ರದ ಬೆದರಿಸುವ ವರ್ತನೆಗೆ ಕಾಂಗ್ರೆಸ್ ಸರ್ಕಾರ ಹೆದರುವುದಿಲ್ಲ. ನಮಗೆ ನಮ್ಮದೇ ಆದ ಇತಿಹಾಸವಿದೆ ಎಂದು ಕಾಂಗ್ರೆಸ್​ ನಾಯಕ ಮನೀಶ್​ ತಿವಾರಿ ಹೇಳಿದ್ದಾರೆ.

ಮನೀಶ್ ತಿವಾರ್

By

Published : Sep 4, 2019, 5:48 PM IST

ನವದೆಹಲಿ:ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದು ಪ್ರತೀಕಾರದ ಕೃತ್ಯ ಎಂದು ಕಾಂಗ್ರೆಸ್ ನಾಯಕ ಮನೀಶ್​ ತಿವಾರಿ ಹೇಳಿದ್ದಾರೆ. ಇಂತಹ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ. ನರೇಂದ್ರ ಮೋದಿ ಸರ್ಕಾರಕ್ಕೆ ಕಾಂಗ್ರಸ್​ ಪಕ್ಷದವರು ಕಠಿಣ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ ಎಂದಿದ್ದಾರೆ.

ಕಳೆದ 5 ವರ್ಷ ಸುಮ್ಮನಿದ್ದ ಬಿಜೆಪಿ ಸರ್ಕಾರ ಈ ಬಾರಿ ತನ್ನ ಎದುರಾಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುವಲ್ಲಿ ನಿರತವಾಗಿದೆ. ಕಾಂಗ್ರೆಸ್ ಇದಕ್ಕೆ ಹೆದರುವುದಿಲ್ಲ ನಮಗೆ ನಮ್ಮದೇ ಆದ ಇತಿಹಾಸವಿದೆ ಎಂದಿದ್ದಾರೆ.

ಅರಾಜಕತೆ ಮತ್ತು ದಬ್ಬಾಳಿಕೆ ಈ ಸರ್ಕಾರದ ಲಕ್ಷಣಗಳಾಗಿವೆ. ಇಂದು ದೇಶ ಆರ್ಥಿಕ ಹಿಂಜರಿತದ ಕಂಗಾಲಾಗಿದೆ. ದೇಶದ ರೈತ ಸಮುದಾಯ ಅಸಮಾಧಾನಗೊಂಡಿದೆ. ಸರ್ಕಾರದ ಅವ್ಯವಹಾರ ಮತ್ತು ವೈಫಲ್ಯದಿಂದ ಗಮನವನ್ನು ಬೇರೆಡೆ ಸೆಳೆಯಲು, ಪ್ರತಿಪಕ್ಷ ನಾಯಕರನ್ನು, ವಿಶೇಷವಾಗಿ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗುತ್ತಿದೆ ಎಂದಿದ್ದಾರೆ.

ABOUT THE AUTHOR

...view details