ಮಣಿಪುರ: ಕೋವಿಡ್ 19 ವಿರುದ್ಧ ಇಡೀ ದೇಶವೇ ಸಮರ ಸಾರಿದ್ದು ರಾಜ್ಯದ ಆಯಾ ಸರ್ಕಾರಗಳು ತಮ್ಮ ಪ್ರಜೆಗಳ ರಕ್ಷಣೆಗೆ ಭಾರೀ ಕಾರ್ಯೋನ್ಮುಖವಾಗಿವೆ. ಈ ಹಿನ್ನೆಲೆ ದೇಶದ ಇತರ ಭಾಗಗಳಲ್ಲಿ ಸಿಲುಕಿರುವ ಮಣಿಪುರದ ಪ್ರಜೆಗಳ ರಕ್ಷಣೆಗೆ ಅಲ್ಲಿನ ಸರ್ಕಾರ ವೆಬ್ಸೈಟ್ ಒಂದನ್ನು ಆರಂಭಮಾಡಿದೆ.
ಕೋವಿಡ್ ಕಂಟಕ: ವಿವಿಧೆಡೆ ಸಿಲುಕಿರುವ ಮಣಿಪುರಿ ಜನರ ರಕ್ಷಣೆಗೆ ವೆಬ್ಸೈಟ್ ಆರಂಭ - corona latest news
ವಿವಿಧೆಡೆ ಸಂಕಷ್ಟಕ್ಕೆ ಸಿಲುಕಿರುವ ಮಣಿಪುರಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿರೆನ್ ಸಿಂಗ್ ಅವರು ವೆಬ್ಸೈಟ್ವೊಂದಕ್ಕೆ ಚಾಲನೆ ನೀಡಿದ್ದಾರೆ. ಈ ಸೈಟ್ ಮೂಲಕ ಸಿಎಂ ಪರಿಹಾರ ನಿಧಿಗೆ ದೇಣಿಗೆ ಸಹ ನೀಡಬಹುದು.
![ಕೋವಿಡ್ ಕಂಟಕ: ವಿವಿಧೆಡೆ ಸಿಲುಕಿರುವ ಮಣಿಪುರಿ ಜನರ ರಕ್ಷಣೆಗೆ ವೆಬ್ಸೈಟ್ ಆರಂಭ ವಿವಿಧೆಡೆ ಸಿಲುಕಿರುವ ಮಣಿಪುರಿ ಜನರ ರಕ್ಷಣೆಗೆ ವೆಬ್ಸೈಟ್ ಸಹಾಯ](https://etvbharatimages.akamaized.net/etvbharat/prod-images/768-512-6590581-144-6590581-1585533697559.jpg)
ವಿವಿಧೆಡೆ ಸಿಲುಕಿರುವ ಮಣಿಪುರಿ ಜನರ ರಕ್ಷಣೆಗೆ ವೆಬ್ಸೈಟ್ ಸಹಾಯ
ಮುಖ್ಯಮಂತ್ರಿ ಎನ್ ಬಿರೆನ್‌ಸಿಂಗ್ ಭಾನುವಾರ ಈ ವೆಬ್ಸೈಟ್ಗೆ ಚಾಲನೆ ನೀಡಿದ್ದಾರೆ. ಇನ್ನು ಈ ವೆಬ್ಸೈಟ್ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಬಹುದಾಗಿದೆ. ಹಾಗೆಯೇ ಇಲ್ಲಿಗೆ ಬಂದ ಹಣವನ್ನು ಅಗತ್ಯ ಇರುವವರಿಗೆ ನೀಡಲು ಈ ವೆಬ್ಸೈಟ್ ಸಹಕಾರಿಯಾಗಲಿದೆ.
ಈ ಕಷ್ಟದ ಸಮಯದಲ್ಲಿ ಬೇರೆ ಕಡೆ ಸಿಕ್ಕಿಹಾಕಿಕೊಂಡಿರುವ ಮತ್ತು ಹಲವಾರು ತೊಂದರೆ ಎಎದುರಿಸುತ್ತಿರುವ ನಮ್ಮ ಸಹೋದರರು ಮತ್ತು ಸಹೋದರಿಯರನ್ನು ತಲುಪುವುದು ಇದರ ಉದ್ದೇಶ ಎಂದು ಸಿಎಂ ಹೇಳಿದ್ದಾರೆ.