ಮಣಿಪುರ:ಅಶಿಸ್ತು ತೋರಿದ ಆರು ಜನ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಕ್ಕೆ ಮಕ್ಕಳೊಂದಿಗೆ ವಿದ್ಯಾರ್ಥಿ ಸಂಘಟನೆಯೊಂದು ಸೇರಿ ಶಾಲೆಗೆ ಬೆಂಕಿ ಹಚ್ಚಿದೆ ಎಂಬ ಆರೋಪ ಕೇಳಿಬಂದಿದೆ.
ಮಕ್ಕಳ ಮೇಲೆ ಶಿಸ್ತು ಕ್ರಮ : ಪೋಷಕರೊಂದಿಗೆ ಸೇರಿ ಶಾಲೆಗೆ ಬೆಂಕಿಯಿಟ್ಟಿತಾ ವಿದ್ಯಾರ್ಥಿ ಸಂಘಟನೆ? - undefined
ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದಕ್ಕೆ ಅತ್ಯಂತ ಹಳೆಯ ಕ್ರೈಸ್ತ ಶಾಲೆಗೆ ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಒಟ್ಟು 10 ಕೊಠಡಿಗಳು ಸುಟ್ಟು ಕರಕಲಾಗಿದ್ದು, ಪ್ರಮುಖ ದಾಖಲೆಗಳಿದ್ದ ಎರಡು ಕೊಠಡಿಗಳೂ ಸಹ ಬೆಂಕಿಗಾಹುತಿಯಾಗಿವೆ. ಕೆಲ ವಿದ್ಯಾರ್ಥಿಗಳ ವಿರುದ್ಧ ತೆಗೆದುಕೊಂಡ ಕ್ರಮಗಳನ್ನ ಇಷ್ಟಪಡದ ಸ್ಥಳೀಯ ವಿದ್ಯಾರ್ಥಿ ಸಂಘಟನೆಯೊಂದು ವಿದ್ಯಾರ್ಥಿಗಳೊಂದಿಗೆ ಪಿತೂರಿ ನಡೆಸಿ ಈ ಕೃತ್ಯವೆಸಗಿದೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಕಕಿಂಗ್ ಜಿಲ್ಲೆಯ ಈ ಸೇಂಟ್ ಜೋಸೆಫ್ ಕ್ರೈಸ್ತ ಶಾಲೆಯಲ್ಲಿ ಸುಮಾರು 1,400ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದು, ಇದು ಮಣಿಪುರದ ಅತೀ ಹಳೆಯ ಶಾಲೆಯಾಗಿದೆ. ಘಟನೆ ಬಗ್ಗೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.