ಮಣಿಪುರ: ಇಲ್ಲಿನ ಚಂದೇಲ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಗೆ ಮೂವರು ಯೋಧರು ಹುತಾತ್ಮರಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಣಿಪುರ: ಉಗ್ರರ ದಾಳಿಗೆ ಮೂವರು ಯೋಧರು ಹುತಾತ್ಮ - ಮ್ಯಾನ್ಮಾರ್ ಗಡಿ
ಅಸ್ಸೋಂ ರೈಫಲ್ಸ್ ಘಟಕದ ಮೇಲೆ ಉಗ್ರರು ದಾಳಿ ನಡೆಸಿದ್ದು, ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಉಗ್ರರ ದಾಳಿಗೆ ಮೂವರು ಭಾರತೀಯ ಯೋಧರು ಹುತಾತ್ಮ
ಮ್ಯಾನ್ಮಾರ್ ಗಡಿ ಸಮೀಪ ಪೀಪಲ್ಸ್ ಲಿಬರೇಶನ್ ಆರ್ಮಿಯ ಉಗ್ರರು ದಾಳಿ ನಡೆಸಿದ್ದು, ಕರ್ತವ್ಯದಲ್ಲಿದ್ದ ಅಸ್ಸೋಂ ರೈಫಲ್ಸ್ ಘಟಕದ ಮೂವರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಉಗ್ರರು ಮೊದಲು ಸುಧಾರಿತ ಸ್ಫೋಟಕವನ್ನು (IED) ಬ್ಲಾಸ್ಟ್ ಮಾಡಿದ್ದು, ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.