ನವದೆಹಲಿ:ದೇಶದಲ್ಲೇ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ.
ಮೇನಕಾ ಗಾಂಧಿ ಸುಲ್ತಾನ್ಪುರದಿಂದ ಸ್ಪರ್ಧೆ ಮಾಡಲಿದ್ದು ಪುತ್ರ ವರುಣ್ ಗಾಂಧಿ ಪಿಲಿಭಿಟ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ರಾಮ್ಶಂಕರ್ ಕಠೇರಿಯಾ ಎತವಾ ಕ್ಷೇತ್ರದಿಂದ ಹಾಗೂ ಬಹುಗುಣ ಜೋಶಿ ಅಲಹಾಬಾದ್ನಿಂದ ಕಣಕ್ಕಿಳಿಯಲಿರುವ ಪ್ರಮುಖರಾಗಿದ್ದಾರೆ.
ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಬಹುಭಾಷಾ ನಟಿ ಜಯಪ್ರದಾ ರಾಮ್ಪುರದಿಂದ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇದರ ಜೊತೆಗೆ ಪಶ್ಚಿಮ ಬಂಗಾಳದ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಇದೇ ವೇಳೆ ಘೋಷಣೆ ಮಾಡಿದೆ.
ಮಾರ್ಚ್ 28ರಿಂದ ಮೋದಿ ರ‍್ಯಾಲಿ:
ಪ್ರಧಾನಿ ಮೋದಿ ಮಾರ್ಚ್ 28ರಿಂದ ಅಧಿಕೃತವಾಗಿ ರ‍್ಯಾಲಿಗಳಆರಂಭಿಸಲಿದ್ದು ಮೊದಲ ದಿನ ಮೀರತ್, ರುದ್ರಾಪುರ, ಜಮ್ಮು ಕಾಶ್ಮೀರ ಹಾಗೂ ಎರಡನೇ ದಿನದಲ್ಲಿ ಆಂಧ್ರ ಪ್ರದೇಶ, ಒಡಿಶಾ ಹಾಗೂ ತೆಲಂಗಾಣದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.