ಬೆರ್ಹಾಂಪುರ್(ಒಡಿಶಾ):ಗಂಡ-ಹೆಂಡತಿ ಹಾಗೂ ಮಗಳು ಶವವಾಗಿ ಪತ್ತೆಯಾಗಿರುವ ಘಟನೆ ಒಡಿಶಾದ ಬೆರ್ಹಾಂಪುರ್ದಲ್ಲಿ ನಡೆದಿದ್ದು, ಕುಟುಂಬದ ಎಲ್ಲರೂ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಕಾರಣ ಅನೇಕ ಸಂಶಯಗಳು ವ್ಯಕ್ತವಾಗುತ್ತಿವೆ.
ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಗಂಡ - ಹೆಂಡತಿ, ಮಗಳು! - ಆತ್ಮಹತ್ಯೆಗೆ ಶರಣಾದ ಗಂಡ-ಹೆಂಡತಿ, ಮಗಳು
ಗಂಡ-ಹೆಂಡತಿ ಹಾಗೂ ಮಗಳು ನಿಗೂಢವಾಗಿ ಮೃತಪಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ರಾತ್ರಿ ಊಟ ಮಾಡಿ ಮಲಗಿದ್ದ ಬ್ರೂಂದಬನ್ ಬೆಹೆರಾ, ಆತನ ಪತ್ನಿ ಉರ್ಮಿಳಾ ಬೆಹೆರಾ ಮತ್ತು ಮಗಳು ಸುನಿತಾ ಆತ್ಮಹತ್ಯೆಗೆ ಶರಣಾಗಿದ್ದು, ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂಬುದರ ಕುರಿತು ಇಲ್ಲಿಯವರೆಗೆ ಮಾಹಿತಿ ಲಭ್ಯವಾಗಿಲ್ಲ. ಗಂಡ ಪ್ಯಾನ್ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದರೆ, ಪತ್ನಿ ಹಾಗೂ ಮಗಳು ಮಲಗಿದ್ದ ಜಾಗದಲ್ಲೇ ಕತ್ತು ಕುಯ್ದುಕೊಂಡು ಸಾವನ್ನಪ್ಪಿದ್ದಾರೆ.
ಬೆಳಗ್ಗಿನ ಜಾವ ಇವರು ಮನೆಯಿಂದ ಹೊರಬಾರದ ಕಾರಣ ಪಕ್ಕದ ಮನೆಯವರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಬ್ರಿಜೇಶ್ ಕುಮಾರ್ ರಾಯ್ ಮಾಹಿತಿ ನೀಡಿದ್ದಾರೆ.