ಹೈದರಾಬಾದ್: ನಿನ್ನೆ ತೆಲಂಗಾಣದ ರಾಜ್ಯಧಾನಿ ಹೈದರಾಬಾದ್ನಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ವ್ಯಕ್ತಿ ಇಂದು ಸರೂರನಗರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಹೈದರಾಬಾದ್ನ ಅಲ್ಮಾಸ್ಗುಡಾ ನಿವಾಸಿ ನವೀನ್ ಕುಮಾರ್ (46) ಮೃತ ವ್ಯಕ್ತಿ. ಭಾನುವಾರ ರಾತ್ರಿ ನೀರಿನಲ್ಲಿ ಸಿಲುಕಿದ್ದ ವ್ಯಕ್ತಿವೋರ್ವನ ವಾಹನವನ್ನು ಮುಂದೂಡಲು ಸಹಾಯ ಮಾಡುತ್ತಿರುವ ವೇಳೆ ನವೀನ್ ಕಾಲು ಜಾರಿ ಬಿದ್ದು, ರಸ್ತೆ ಮೇಲೆ ತುಂಬಿ ಹರಿಯುತ್ತಿರುವ ನೀರಿನಲ್ಲಿ ಸರೂರನಗರ ಕೆರೆಯೆಡೆಗೆ ಕೊಚ್ಚಿ ಹೋಗಿದ್ದರು.
ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ ಪೊಲೀಸರ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿಯ ಸತತ 20ಗಂಟೆಗಳ ಕಾರ್ಯಾಚರಣೆ ನಡೆಸಿ ನವೀನ್ ಮೃತದೇಹ ಸರೂರನಗರ ಕೆರೆಯಿಂದ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಮೃತನ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ರಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಹೇಳಿದ್ದಾರೆ.
ರಸ್ತೆ ಹಾಗೂ ಕೆರೆಗೆ ಅಡ್ಡಲಾಗಿ ಯಾವುದೇ ತಡೆಗೋಡೆ ಇಲ್ಲ. ಮಳೆ ಅಬ್ಬರ ಜೋರಾಗಿದ್ದು, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗುವುದು ಎಂದು ಭಾಗವತ್ ತಿಳಿಸಿದ್ದಾರೆ.