ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಹೋಂ​ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಸಾವು.. ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.. - ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಸಾವು

ಈತ ಕೊರೊನಾದಿಂದಾಗಿಯೇ ಸಾವನ್ನಪ್ಪಿರೋದಾ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣವೇನೆಂಬುದು ತಿಳಿದು ಬರಲಿದೆ.

Man under observation for coronavirus dies in Kerala
ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಸಾವು

By

Published : Mar 29, 2020, 5:53 PM IST

ಕೊಟ್ಟಾಯಂ :ಹೋಂ​ ಕ್ವಾರಂಟೈನ್​ನಲ್ಲಿದ್ದ 41 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ ಕೇರಳದ ಕುಮಾರಕೋಮ್​ನಲ್ಲಿ ನಡೆದಿದೆ.

ಮೃತ ವ್ಯಕ್ತಿಯು ರಾಷ್ಟ್ರೀಯ ಪರವಾನಗಿ ಹೊಂದಿದ್ದ ಲಾರಿಯ ಚಾಲಕನಾಗಿದ್ದ. ಮಾ.18 ರಂದು ಮುಂಬೈಗೆ ಭೇಟಿ ನೀಡಿ ಬಂದ ಬಳಿಕ ಕುಮಾರಕೋಮ್​ನ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್​ನಲ್ಲಿದ್ದ. ಆದರೆ, ಇಂದು ಇದ್ದಕ್ಕಿದ್ದಂತೆ ಪ್ರಜ್ಞೆತಪ್ಪಿ ಕುಸಿದು ಬಿದ್ದು ಮನೆಯಲ್ಲೇ ಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಲಾಗಿದೆ. ಈವರೆಗೂ ಕೇರಳದಲ್ಲಿ ಒಬ್ಬರು ಮಾತ್ರ ಮಹಾಮಾರಿಗೆ ಬಲಿಯಾಗಿದ್ದಾರೆ. 198 ಕೊರೊನಾ ಪ್ರಕರಣಗಳು ಈ ರಾಜ್ಯದಲ್ಲಿ ವರದಿಯಾಗಿವೆ.

ABOUT THE AUTHOR

...view details