ರಾಂಚಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮೂರು ದಿನಗಳ ಕಾಲ ಜಾರ್ಖಂಡ್ ಭೇಟಿಯಲ್ಲಿದ್ದು, ಭದ್ರತೆಗಾಗಿ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಅನ್ನು ಲೆಕ್ಕಿಸದೇ ಬೈಕ್ನಲ್ಲಿ ಬಂದ ಯುವಕನೊಬ್ಬ ನುಗ್ಗಲು ಯತ್ನಿಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ.
'ಇದು ನಮ್ಮಪ್ಪನ ರಸ್ತೆ' ಎಂದು ನುಗ್ಗಿದ ಯುವಕ... ಮುಂದೇನಾಯ್ತು? - ಸಂಚಾರ ನಿಯಮ ಉಲ್ಲಂಘಿಸಲು ಯತ್ನ
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಭೇಟಿಗಾಗಿ ಭದ್ರತೆಯ ದೃಷ್ಟಿಯಿಂದ ಅಳವಡಿಸಿದ್ದ ಬ್ಯಾರಿಕೇಡ್ ಲೆಕ್ಕಿಸದೇ ಬೈಕ್ನಲ್ಲಿ ನುಗ್ಗಲು ಯತ್ನಿಸಿದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.
!['ಇದು ನಮ್ಮಪ್ಪನ ರಸ್ತೆ' ಎಂದು ನುಗ್ಗಿದ ಯುವಕ... ಮುಂದೇನಾಯ್ತು? Man tries to breach President Kovind's security in Ranchi](https://etvbharatimages.akamaized.net/etvbharat/prod-images/768-512-6238006-thumbnail-3x2-megha.jpg)
ಸಂಚಾರ ನಿಯಮ ಉಲ್ಲಂಘಿಸಲು ಯತ್ನ
ಜಾರ್ಖಂಡ್ನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿಗಳು ಇಂದು ಭಾಗಿಯಾಗಿದ್ದರು. ರಾಜಭವನದ ಎದುರಿಗೆ ಭದ್ರತೆಯ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೂ ಸಂಚಾರ ನಿಯಮ ಉಲ್ಲಂಘಿಸಲು ಯತ್ನಿಸಿದ ಈ ಯುವಕನನ್ನ ತಕ್ಷಣವೇ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವೇಳೆ ಯುವಕನಿಗೆ ಗಾಯಗಳಾಗಿದ್ದು, ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇನ್ನು ವಿಶೇಷವೆಂದರೆ ಯುವಕನ ಬೈಕ್ ಹಿಂಭಾಗದಲ್ಲಿ 'ಹೌದು, ಇದು ನಮ್ಮಪ್ಪನ ರಸ್ತೆ' ಎಂದು ಕೂಡ ಬರೆದಿರುವುದು ಕಂಡು ಬಂದಿದೆ.