ಕರ್ನಾಟಕ

karnataka

ETV Bharat / bharat

ಬಿಎಂಡಬ್ಲ್ಯು ಮೇಲೆ ಮೂತ್ರ ವಿಸರ್ಜನೆ ತಡೆದ ಸೆಕ್ಯುರಿಟಿ ಗಾರ್ಡ್​ಗೆ ಬೆಂಕಿ ಹಚ್ಚಿ ಕೊಲೆ ಯತ್ನ - man tried to burn security guard in Pune

ಮಂಗಳವಾರ ಮಧ್ಯಾಹ್ನ, ಆರೋಪಿ ರಿಕ್ಷಾ ಚಾಲಕ ಮಹೇಂದ್ರ ಬಾಲು ಕದಮ್ ತನ್ನ ರಿಕ್ಷಾದಿಂದ ಹೊರಬಂದು ಕಂಪನಿಯ ಗೇಟ್‌ಗಳ ಮುಂದೆ ನಿಂತ ಬಿಎಂಡಬ್ಲ್ಯು ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ. ನಂತರ, ಸೆಕ್ಯುರಿಟಿ ಗಾರ್ಡ್ ಶಂಕರ್​ ಇದಕ್ಕೆ ವಿರೋಧ ವ್ಯಕ್ತಪಡಿಸಿದರು..

ಬಿಎಂಡಬ್ಲ್ಯು ಮೇಲೆ ಮೂತ್ರ ವಿಸರ್ಜನೆ ತಡೆದ ಸೆಕ್ಯುರಿಟಿ ಗಾರ್ಡ್​ಗೆ ಬೆಂಕಿ ಹಚ್ಚಿ ಕೊಲೆ ಯತ್ನ
ಬಿಎಂಡಬ್ಲ್ಯು ಮೇಲೆ ಮೂತ್ರ ವಿಸರ್ಜನೆ ತಡೆದ ಸೆಕ್ಯುರಿಟಿ ಗಾರ್ಡ್​ಗೆ ಬೆಂಕಿ ಹಚ್ಚಿ ಕೊಲೆ ಯತ್ನ

By

Published : Nov 18, 2020, 1:13 PM IST

ಪಿಂಪ್ರಿ-ಚಿಂಚ್‌ವಾಡ್: ನಗರದ ಭೋಸಾರಿ ಎಂಐಡಿಸಿ ಪ್ರದೇಶದಲ್ಲಿ ಬಿಎಂಡಬ್ಲ್ಯು ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ತಡೆದ ಸೆಕ್ಯುರಿಟಿ ಗಾರ್ಡ್ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ ಆರೋಪಿಯನ್ನು ಎಂಐಡಿಸಿ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಸಂಜೆ 4.30 ರ ಸುಮಾರಿಗೆ ಬಾಲಾಜಿ ನಗರದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಶಂಕರ್ ಭಗವಾನ್ ವೈಫಲ್ಕರ್ ಪೊಲೀಸರಿಗೆ ದೂರು ನೀಡಿದ್ದಾರೆ. ಎಂಐಡಿಸಿಯ ಬಾಲಾಜಿ ನಗರದ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ, ಆರೋಪಿ ರಿಕ್ಷಾ ಚಾಲಕ ಮಹೇಂದ್ರ ಬಾಲು ಕದಮ್ ತನ್ನ ರಿಕ್ಷಾದಿಂದ ಹೊರಬಂದು ಕಂಪನಿಯ ಗೇಟ್‌ಗಳ ಮುಂದೆ ನಿಂತ ಬಿಎಂಡಬ್ಲ್ಯು ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ. ನಂತರ, ಸೆಕ್ಯುರಿಟಿ ಗಾರ್ಡ್ ಶಂಕರ್​ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಇದರಿಂದ ಕೋಪಗೊಂಡ ಆರೋಪಿ ಭದ್ರತಾ ಸಿಬ್ಬಂದಿಯ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದನು. ಘಟನೆಯಲ್ಲಿ ಭದ್ರತಾ ಸಿಬ್ಬಂದಿಗೆ ಶೇ.20 ರಷ್ಟು ಸುಟ್ಟಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ರಿಕ್ಷಾ ಚಾಲಕ ಕದಮ್ ನನ್ನು ಬಂಧಿಸಲಾಗಿದೆ.

For All Latest Updates

TAGGED:

ABOUT THE AUTHOR

...view details