ಕೊಲ್ಕತ್ತಾ (ಪಶ್ಚಿಮ ಬಂಗಾಳ):ಇಲ್ಲಿನ ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿಆತಂಕಕ್ಕೆ ಒಳಗಾಗಿದ್ದಹೆಪಟೈಟಿಸಿ-ಬಿ (ಕಾಮಾಲೆ ರೋಗ) ರೋಗಿ ರಕ್ಷಿಸಲು 150 ಕಿ.ಮೀ. ಪ್ರಯಾಣಿಸಿದ ಯುವತಿಯೊಬ್ಬರು ಮನೆ ಬಾಗಿಲಿಗೆ ಔಷಧ ತಲುಪಿಸಿ ರೋಗಿಯ ಜೀವ ಉಳಿಸಿದ್ದಾರೆ.
ರೋಗಿ ಪೂರ್ಣಿಮಾ ಮತ್ತು ಅವರ ಕುಟುಂಬ ಚಂದ್ರಕೋನ ಗ್ರಾಮದಲ್ಲಿ ವಾಸವಿದ್ದಾರೆ. ಲಾಕ್ಡೌನ್ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಖರೀದಿಸಿದ ಔಷಧಗಳು ಕೆಲವು ದಿನಗಳ ಹಿಂದೆ ಖಾಲಿಯಾಗಿದ್ದವು. ಹೀಗಾಗಿ ರೋಗಿಗೆ ಔಷಧಗಳ ಅವಶ್ಯಕತೆ ಹೆಚ್ಚಾಗಿತ್ತು.
ರೋಗಿಯ ಪರಿಸ್ಥಿತಿ ತುಂಬಾ ಗಂಭೀರವಾದ ಬಳಿಕ ಔಷಧ ಖರೀಧಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸಿದೆವು. ಅವೆಲ್ಲಾ ವ್ಯರ್ಥವಾದವು. ಬಳಿಕ ನನ್ನ ಸ್ನೇಹಿತನ ಸಹಾಯದಿಂದ ಪಶ್ಚಿಮ ಬಂಗಾಳ ಹ್ಯಾಮ್ ರೇಡಿಯೋ ಕ್ಲಬ್ ಸಂಪರ್ಕಿಸಿದೆ. ಪರಿಸ್ಥಿತಿ ಹೀಗಾಗಿದೆ. ಸಹಾಯ ಮಾಡಲು ಸಾಧ್ಯವೇ ಎಂದು ಕೇಳಿಕೊಳ್ಳಲಾಯಿತು ಎಂದು ರೋಗಿಯ (ಪೂರ್ಣಿಮಾ) ಸಂಬಂಧಿ ಮತ್ತು ನೆರೆಹೊರೆಯವರಾದ ಸೌಮಿತ್ರ ಮೌರ್ ಹೇಳಿದರು.